
ನವದೆಹಲಿ: ಬಾಂಗ್ಲಾದೇಶದಲ್ಲಿ (Bangladesh) ಕಳೆದ ಆಗಸ್ಟ್ 5 ರಂದು ನಡೆದ ದಂಗೆಯ ಬಳಿಕ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.(India extends ex-B’desh PM Sheikh Hasina’s visa amid extradition call by Dhaka) ಈ ನಡುವೆ ಭಾರತ ಹಸೀನಾ ಅವರ ವೀಸಾ ಅವಧಿಯನ್ನು ವಿಸ್ತರಿಸಿದೆ ಎಂದು ಮೂಲಗಳು ತಿಳಿಸಿವೆ.
ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರು ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಡಿಸೆಂಬರ್ 23 ರಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದರ ನಡುವೆ ಭಾರತ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. (Bangladesh prime minister Sheikh Hasina, who has been in the country since last August)
ಭಾರತದಲ್ಲಿ (India extends ex-B’desh PM Sheikh Hasina’s visa amid extradition call by Dhaka, ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ವೀಸಾ ಅವಧಿ ವಿಸ್ತರಿಸಿದ ಭಾರತ) ನಿರಾಶ್ರಿತರ ಕಾನೂನು ಇಲ್ಲದ ಕಾರಣ ಶೇಖ್ ಹಸೀನಾ ಅವರಿಗೆ ಇನ್ನೂ ಯಾವುದೇ ನಿರಾಶ್ರಿತರ ಸ್ಥಾನಮಾನ ನೀಡಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಮಂಗಳವಾರ ಮುಂಜಾನೆ, ಬಾಂಗ್ಲಾದೇಶದ ಅಧಿಕಾರಿಗಳು ಶೇಖ್ ಹಸೀನಾ ಸೇರಿದಂತೆ 97 ಜನರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಿದ್ದರು. ಇವರಲ್ಲಿ 22 ಜನರು ಆಪಾದಿತ ಅಪಹರಣದಲ್ಲಿ ಭಾಗಿಯಾಗಿರುವ ಆರೋಪವನ್ನು ಎದುರಿಸುತ್ತಿದ್ದಾರೆ, ಆದರೆ 75 ಮಂದಿ ಕಳೆದ ವರ್ಷ ವಿದ್ಯಾರ್ಥಿ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಕೊಲೆ ಆರೋಪವನ್ನು ಹೊಂದಿದ್ದಾರೆ ಎನ್ನಲಾಗಿದೆ.
ಶೇಖ್ ಹಸೀನಾ ಅವರು ಆಗಸ್ಟ್ 2024 ರವರೆಗೆ 15 ವರ್ಷಗಳ ಸುದೀರ್ಘ ಕಾಲ ಬಾಂಗ್ಲಾದೇಶವನ್ನು ಆಳಿದ್ದರು ಇದರ ನಡುವೆ ವಿದ್ಯಾರ್ಥಿಗಳ ನೇತೃತ್ವದ ಬೃಹತ್ ದಂಗೆಯು ಅವರ ಅವಾಮಿ ಲೀಗ್ (AL) ಆಡಳಿತವನ್ನು ಬುಡಮೇಲು ಮಾಡಿತ್ತು. ಜೊತೆಗೆ ನಡೆದ ಸಂಘರ್ಷದಲ್ಲಿ ನೂರಾರು ಜನರು ಕೊಲ್ಲಲ್ಪಟ್ಟರು ಮತ್ತು ಸಾವಿರಾರು ಮಂದಿ ಗಾಯಗೊಂಡರು, ಈ ವೇಳೆ ಪ್ರತಿಭಟನಾಕಾರರು ಢಾಕಾದಲ್ಲಿರುವ ಹಸೀನಾ ಅವರ ಅರಮನೆಗೆ ಮುತ್ತಿಗೆ ಹಾಕಿ ಕೈಗೆ ಸಿಕ್ಕಿದ ವಸ್ತುಗಳನ್ನು ದೋಚಿದರು. ಆಗಸ್ಟ್ 5 ರಂದು ಹಸೀನಾ ಬಾಂಗ್ಲಾದೇಶದಿಂದ ಪಲಾಯನ ಮಾಡಿ ಭಾರತಕ್ಕೆ ಬಂದು ಆಶ್ರಯ ಪಡೆದರು.
ಹಸ್ತಾಂತರದ ಬೇಡಿಕೆಯ ನಡುವೆ, ಶೇಖ್ ಹಸೀನಾ ಅವರ ವೀಸಾವನ್ನು ವಿಸ್ತರಿಸುವ ಮೂಲಕ ಭಾರತವು ಬಾಂಗ್ಲಾದೇಶ ಸರ್ಕಾರಕ್ಕೆ ತಕ್ಕ ಉತ್ತರವನ್ನು ನೀಡಿದೆ ಮತ್ತು ಸದ್ಯಕ್ಕೆ ಅವರನ್ನು ಹಸ್ತಾಂತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಭಾರತದ ಈ ನಿರ್ಧಾರದ ನಂತರ ಬಾಂಗ್ಲಾದೇಶ ಈ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕಾದುನೋಡಬೇಕಿದೆ.

