ಕಾನ್ಸ್ಟಿಪೇಶನ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಕಾಡ್ತಾ ಇದೆ. ಈ ಮಲಬದ್ಧತೆಯ ಪ್ರಾಬ್ಲಂ ಗೆ ನಮ್ಮ ಲೈಫ್ ಸ್ಟೈಲ್ ಹಾಗೂ ಮುಖ್ಯವಾಗಿ ನಾವು ಸೇವಿಸುವಂತಹ ಆಹಾರ ಕಾರಣವಾಗುತ್ತದೆ. ಹಾಗಾಗಿ ಕಾನ್ಸ್ಟಿಪೇಶನ್ ಇದ್ದವರು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಿ ಯಾವ ಆಹಾರವನ್ನ ಅವಾಯ್ಡ್ ಮಾಡಬೇಕು ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ.

ಡೈರಿ ಉತ್ಪನ್ನಗಳು
ಮಲಬದ್ಧತೆ ಸಮಸ್ಯೆ ಇರುವ ವ್ಯಕ್ತಿಗಳು ಡೈರಿ ಉತ್ಪನ್ನಗಳು ಅಂದ್ರೆ ಚೀಸ್ ಹಾಲು ಐಸ್ ಕ್ರೀಮ್ ಇಂತಹ ಪದಾರ್ಥಗಳನ್ನು ಅವಾಯ್ಡ್ ಮಾಡುವುದ ಉತ್ತಮ.

ಎಣ್ಣೆಯಲ್ಲಿ ಕರೆದ ಪದಾರ್ಥಗಳು
ಮುಖ್ಯವಾಗಿ ಮಲಬದ್ಧತೆ ಇರುವವರು ಎಣ್ಣೆಯಲ್ಲಿ ಕರೆದಂಥ ಪದಾರ್ಥಗಳನ್ನ ಅವಾಯ್ಡ್ ಮಾಡುವುದು ಒಳ್ಳೆಯದು ,ಕಾರಣ ಇದರಲ್ಲಿ ಫೈಬರ್ ಕಂಟೆಂಟ್ ಕಡಿಮೆ ಇರುತ್ತದೆ. ಬಜ್ಜಿ , ಬೋಂಡಾದಲ್ಲಿ ಫ್ಯಾಟ್ ಹೆಚ್ಚಿದ್ದು ಜೀರ್ಣಕ್ರಿಯೆ ಸರಿಯಾಗುವುದಿಲ್ಲ.

ಕೆಫೀನ್
ಕಾಫಿ ಹಾಗು ಟಿ ನಲ್ಲಿ ಕೆಫೀನ್ ಅಂಶ ಹೆಚ್ಚಿರುತ್ತದೆ ಹಾಗೂ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ , ಕೆಫೀನ್ ಅತಿಯಾದ ಸೇವನೆಯು ನಿರ್ಜಲೀಕರಣಕ್ಕೆ ಕಾರಣವಾಗಬಹುದು ಮತ್ತು ಮಲಬದ್ಧತೆಯನ್ನು ಇನ್ನಷ್ಟು ಹದಗೆಡಿಸುತ್ತದೆ.

ಫೈಬರ್ ಕಡಿಮೆ ಇರುವ ಆಹಾರ
ವೈಟ್ ಬ್ರೆಡ್, ಪಾಸ್ಟಾ ಮತ್ತು ಅಕ್ಕಿಯಂತಹ ಪದಾರ್ಥಗಳಲ್ಲಿ ಫೈಬರ್ ಕಡಿಮೆ ಇರುತ್ತದೆ..ಇದರಿಂದ ಮಲಬದ್ಧತೆ ಹೆಚ್ಚಾಗುತ್ತದೆ..






