ರಾಜ್ಯ ಸಚಿವ ಸಂಪುಟದ (Cabinet) ಸದಸ್ಯರ ಜೊತೆಗೆ ಸಿಎಂ ಸಿದ್ದರಾಮಯ್ಯ (Cm siddaramaiah) ಡಿನ್ನರ್ ಮಾತುಕತೆ ನಡೆಸಿದ ಮಾತುಕತೆ ನಡೆಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಸಚಿವ ಎಂ.ಬಿ ಪಾಟೀಲ್ (MB patil) ಪ್ರತಿಕ್ರಿಯಿಸಿದ್ದಾರೆ.
ಈ ವಿಚಾರವನ್ನು ಬೇರೆ ರೀತಿ ಬಿಂಬಿಸುವ ಅಗತ್ಯವಿಲ್ಲ. ಎಸ್‌ಸಿ, ಎಸ್‌ಟಿ ಶಾಸಕರು, ಸಚಿವರನ್ನು ಊಟಕ್ಕೆ ಕರೆದಿದ್ದಾರೆ. ಹೀಗಾಗಿ ಸಿಎಂ ಅಲ್ಲಿಗೆ ಹೋಗಿದ್ದಾರೆ.ಈ ವೇಳೆ ಸಹಜವಾಗಿ ಅವರ ಸಮಸ್ಯೆ ಸಿಎಂ ಬಳಿ ಹೇಳಿಕೊಂಡಿದ್ದಾರೆ.

ಇದ್ರಲ್ಲಿ ವಿಶೇಷ ಏನಿದೆ..? ಸಿಎಂ ನಮ್ಮ ಮನೆಗೆ ಊಟಕ್ಕೆ ಕರೆದರು ಬರ್ತಾರೆ.ಅದರಲ್ಲಿ ತಪ್ಪೇನಿದೆ ಹೇಳಿ..ಊಟಕ್ಕೆ ಹೋದರೆ ತಪ್ಪೇನಿದೆ ? ಪಕ್ಷದಲ್ಲಿ ಹೈಕಮಾಂಡ್ ಇದೆ, ವರಿಷ್ಠರಿದ್ದಾರೆ.ಎಲ್ಲವನ್ನೂ ಅವರು ನೋಡಿಕೊಳ್ಳುತ್ತಾರೆ ಎಂದಿದ್ದಾರೆ.
ಬಿಜೆಪಿ ನಾಯಕರಾದ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್, ಮಾಜಿ ಸಿಎಂ ಬೊಮ್ಮಾಯಿ ನಮ್ಮ ಮನೆಗೆ ಊಟಕ್ಕೆ ಬಂದಿದ್ರು.ಅದು ಕೂಡ ದೊಡ್ಡ ಸುದ್ದಿಯಾಗಿತ್ತು.ಊಟಕ್ಕೆ ಹೋಗುವುದೆಲ್ಲ ದೊಡ್ಡದಲ್ಲ. ಸಿಎಂ, ಡಿಸಿಎಂ ಇಬ್ಬರನ್ನು ನಮ್ಮ ಮನೆಗೂ ಊಟಕ್ಕೆ ಕರೆಯೋಣ ಬರ್ತಾರೆ.ಅದರಲ್ಲಿ ವಿಶೇಷ ಏನೂ ಇಲ್ಲ ಎಂದಿದ್ದಾರೆ.

ಡಿಸಿಎಂ ವಿದೇಶದಲ್ಲಿ ಇದ್ದಾಗ ಬೇಕಂತಲೇ ಊಟಕ್ಕೆ ಸೇರಿದ್ದಾರೆ ಅನ್ನೋದು ಮಾಧ್ಯಮಗಳ ಸೃಷ್ಟಿ ಅಷ್ಟೇ ಎಂದು ಈ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಮಾದ್ಯಮದವರ ಮೇಲೆ ಹೊಣೆ ಹೊರಿಸಿ ಜಾರಿಕೊಂಡಿದ್ದಾರೆ.