
ಬೆಂಗಳೂರಿನ ಜೆ.ಪಿ ಭವನದಲ್ಲಿ ಡಾ. ಮನಮೋಹನ್ ಸಿಂಗ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಇವತ್ತು ಅತ್ಯಂತ ದುಖಃದ ದಿವಸ, ಮನಮೋಹನ್ ಸಿಂಗ್‌ರನ್ನ ಲೋಕಸಭೆಯಲ್ಲಿ 1991ರಲ್ಲಿ ನೋಡಿದ್ದೆ. ಆಗ ನಾನು ಕರ್ನಾಟಕದಿಂದ ಮೊದಲ ಬಾರಿಗೆ ಲೋಕಸಭೆಗೆ ಹೋಗಿದ್ದೆ. ಅವರು ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಮಂತ್ರಿ ಆಗಿದ್ದರು. ಅದಕ್ಕೂ ಮೊದಲು ಹಲವಾರು ಹುದ್ದೆಗಳನ್ನು ನಿಭಾಯಿಸಿ, ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕೆಲಸ ಮಾಡಿದ್ದಾರೆ. ಆರ್ಥಿಕ ತಜ್ಞರಾಗಿದ್ದರು, ವಿಶ್ವ ಸಂಸ್ಥೆಯಲ್ಲಿ ಕೆಲಸ ಮಾಡಿದ್ರು. ಆರ್ಥಿಕವಾಗಿ ತುಂಬಾ ಬುದ್ಧಿವಂತರು. ಹಿ ಇಸ್ ಇನ್ ಎಕನಾಮಿಸ್ಟ್. ಬಹಳ ಅನುಭವಂತರಾಗಿದ್ದರು ಎಂದಿದ್ದಾರೆ.
ನರಸಿಂಹರಾವ್ ಪ್ರಧಾನಿ ಆಗಿದ್ದಾಗ, ದೇಶದ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಆಗ ನಮ್ಮ ದೇಶದ 130 ಟನ್ ಚಿನ್ನ ಅಡ ಇಟ್ಟಿದ್ರು. ನಮ್ಮ ದೇಶಕ್ಕೆ ಕೆಟ್ಟ ಹೆಸರು ಬರೋದು, ಆ ಸಂಧರ್ಭದಲ್ಲಿ ಹಣಕಾಸು ಮಂತ್ರಿ ಆಗಿದ್ದರು.. ಈ ದೇಶದ ಗೌರವ ಉಳಿಸಲು ಆರ್ಥಿಕ ತಜ್ಞರಾಗಿ ತಮ್ಮ ಪ್ರಯತ್ನ ಪ್ರಾರಂಭ ಮಾಡಿದ್ರು. ದೇಶದ ಸಂಕಷ್ಟದ ಪರಿಸ್ಥಿತಿ ಸುಧಾರಣೆ ತರಲು ಸರ್ವ ಪ್ರಯತ್ನ ಮಾಡಿದ್ರು. ಪ್ರಧಾನ ಮಂತ್ರಿಯಾಗಿ 10ವರ್ಷ ದೇಶ ಆಳಿದ್ದಾರೆ. ನೆಹರು, ಇಂದಿರಾ ಬಿಟ್ಟರೆ 10 ವರ್ಷ ಪ್ರಧಾನಿಯಾಗಿದ್ದು ಅವರೊಬ್ಬರೇ ಆಗಿದ್ದರು.

ಡಾ ಮನಮೋಹನ್ ಸಿಂಗ್ ಅವರು ಇಂದು ನಮ್ಮನ್ನ ಅಗಲಿದ್ದಾರೆ. ಪಕ್ಷ ಬೇರೆ, ಒಬ್ಬ ದೇಶದ ಮಾಜಿ ಪ್ರಧಾನಿ ಅವರು.. ನಮ್ಮ ಪಕ್ಷದ ಪರವಾಗಿ ಕುಮಾರಸ್ವಾಮಿ ಹೋಗಿದ್ದಾರೆ. ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿ ಬರ್ತಾರೆ. ದೇಶದಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮ ಮಾಡಬಾರದು.. ನ್ಯಾಷನಲ್ ಫ್ಲ್ಯಾಗ್ ಅರ್ಧಕ್ಕೆ ಇಳಿಸಿ ಗೌರವ ಕೊಡಬೇಕು. ಅವರು ಸುಧೀರ್ಘ ಸಮಯ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಮುತ್ಸದಿ ರಾಜಕಾರಣಿ ಹಿರಿಯ ರಾಜಕಾರಣಿ 92ನೇ ವಯಸ್ಸಲ್ಲಿ ಅಗಲಿದ್ದಾರೆ. ವಯಕ್ತಿಕ ನನಗೆ ತುಂಬಾ ಬೇಸರವಾಗಿದೆ. ಅವರ ಆತ್ಮಕ್ಕೆ ಭಗವಂತ ಮೋಕ್ಷ ಕೊಡಲಿ. ನೋವು ಸಹಿಸುವ ಶಕ್ತಿಯನ್ನು ಆ ಪರಮಾತ್ಮ ಅವರ ಕುಟುಂಬಕ್ಕೆ ಕೊಡಲಿ ಎಂದು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವುಕರಾಗಿದ್ದಾರೆ ಮಾಜಿ ಪ್ರಧಾನಿ ದೇವೇಗೌಡ.










