ಅಲ್ಲು ಅರ್ಜುನ್ ನಟನೆಯ ‘ಪುಷ್ಪ-2ʼಪ್ರೀಮಿಯರ್ ಶೋ (Pushpa-2 Premier Show) ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆ ಕುಟುಂಬಕ್ಕೆ 2 ಕೋಟಿ ರೂ(2 Crores) ಪರಿಹಾರವನ್ನು ಅಲ್ಲು ಅರವಿಂದ್ ಘೋಷಿಸಿದ್ದಾರೆ.
Dec-4ರಂದು ‘ಪುಷ್ಪ 2’ ಪ್ರೀಮಿಯರ್ (Premier Show) ವೇಳೆ ನಡೆದ ಕಾಲ್ತುಳಿತದಲ್ಲಿ ಮೃತ ರೇವತಿ (Revathi) ಪುತ್ರ ಶ್ರೀಜಾ (Shreeja) ಕೂಡ ತೀವ್ರ ಗಂಭೀರ ಸ್ಥಿತಿಯಲ್ಲಿದ್ದು, ಈಗಾಗಲೇ ಅಲ್ಲು ಅರ್ಜುನ್ (Allu Arjun Father) ತಂದೆ ಕುಟುಂಬಸ್ಥರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಈ ಹಿಂದೆ 25 ಲಕ್ಷ ರೂ(25 Lakhs) ಕೊಡೋದಾಗಿ ತಿಳಿಸಿದ್ದರು. ಆದರೆ ಈಗ ಮೃತಪಟ್ಟ ಕುಟುಂಬಕ್ಕೆ 2 ಕೋಟಿ ರೂ(2 crores) ಪರಿಹಾರ ನೀಡೋವುದಾಗಿ ಅಲ್ಲು ಅರವಿಂದ್ (Allu Arvind) ತಿಳಿಸಿದ್ದಾರೆ.
ಅಲ್ಲು ಅರ್ಜುನ್ ಕಡೆಯಿಂದ 1 ಕೋಟಿ ರೂ. ಜೊತೆಗೆ ‘ಪುಷ್ಪ-2’ ನಿರ್ಮಾಪಕರು (Pushpa-2 Producer) ಮತ್ತು ನಿರ್ದೇಶಕ ಸುಕುಮಾರ್ (Director Sukumar) ಕಡೆಯಿಂದ 1 ಕೋಟಿ ರೂ ಕುಟುಂಬಕ್ಕೆ ಕೊಡಲು ನಿರ್ಧರಿಸಿದ್ದಾರೆ.
Dec-13ರಂದು ಕಾಲ್ತುಳಿತ ಪ್ರಕರಣ ಸಂಬಂಧ ಅಲ್ಲು ಅರ್ಜುನ್‌ರನ್ನು ಚಿಕ್ಕಡಪಲ್ಲಿ (Chikkadapalli Police) ಪೊಲೀಸರು ಬಂಧಿಸಿದ್ದರು. ಬೇಲ್ ಸಿಕ್ಕ ಹಿನ್ನೆಲೆ ನಟ ರಿಲೀಸ್ ಆಗಿದ್ದರು. ನಿನ್ನೆಯಷ್ಟೇ (Dec-24) ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ (Hyderabad Chikkadapalli Police station) ನಟ ಸತತ 4 ಗಂಟೆಗಳ ಕಾಲ ವಿಚಾರಣೆ ಎದುರಿಸಿ ಬಂದಿದ್ದರು.