ನವರತ್ನ ಜ್ಯುವೆಲರ್ಸ್ (Navarathna jewellery) ನಿಂದ ಚಿನ್ನ ಖರೀದಿ ನೆಪದಲ್ಲಿ ಜ್ಯುವೆಲ್ಲರಿ ಮಾಲೀಕನಿಗೆ ವಂಚನೆ ಮಾಡಿರುವ ಕೇಸ್ ಗೆ ಸಂಬಂಧಪಟ್ಟಂತೆ ಮಾಜಿ ಸಚಿವ ವರ್ತೂರು ಪ್ರಕಾಶ್‌ಗೆ (Vartur prakash) ಬಂಧನ ಭೀತಿ ಹೆಚ್ಚಾಗಿದೆ. ಇಂದು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದು ಯಾವ್ದೇ ಕ್ಷಣದಲ್ಲಿ ಬಂಧನ ಸಾಧ್ಯೆತೆಯಿದೆ.
ಈಗಾಗಲೇ ಈ ಪ್ರಕರಣದಲ್ಲಿ ಪೊಲೀಸರು ಎರಡು ಬಾರಿ ನೋಟಿಸ್ ನೀಡಿದ್ರು ಕೂಡ ವರ್ತೂರು ಪ್ರಕಾಶ್ ನೋಟೀಸ್ ಗಳಿಗೆ ಸರಿಯಾಗಿ ಸ್ಪಂದಿಸಿಲ್ಲ. ಈ ಕಾರಣಕ್ಕೆ ಇಂದು ಮೂರನೇ ನೋಟೀಸ್ ನೀಡಲಾಗಿತ್ತು. ಹೀಗಾಗಿ ಬಂಧನದ ಭೀತಿಯಿಂದ ಪಾರಾಗಲು ವರ್ತೂರು ಪ್ರಕಾಶ್ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.
ಇಂದೇ ವಿಚಾರಣೆಗೆ ಹಾಜರಾಗುವಂತೆ ಮೂರನೇ ಬಾರಿಗೆ ನೋಟಿಸ್ ಜಾರಿ ಮಾಡದ ಹಿನ್ನಲೆ ಬೆಳಿಗ್ಗೆಯೇ ವರ್ತೂರ್ ಪ್ರಕಾಶ್ ಹಾಜರಾಗಿದ್ದಾರೆ.ಒಂದು ವೇಳೆ ಇಂದು ಬೆಳಗ್ಗೆ ವಿಚಾರಣೆಗೆ ಹಾಜರಾಗದಿದ್ದಲ್ಲಿ ಸಂಜೆ ವೇಳೆಗೆ ವರ್ತೂರು ಪ್ರಕಾಶ್ ರನ್ನ ವಶಕ್ಕೆ ಪಡೆಯುವ ಸಾಧ್ಯತೆಯಿತ್ತು.