ಹೊಸದಿಲ್ಲಿ:ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 3.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪನ ಸಂಶೋಧನಾ ಸಂಸ್ಥೆ (ಐಎಸ್‌ಆರ್) ತಿಳಿಸಿದೆ.
ಕಂಪನವು ಬೆಳಿಗ್ಗೆ 10.44 ಕ್ಕೆ ಸಂಭವಿಸಿದೆ, ಅದರ ಕೇಂದ್ರಬಿಂದು ಲಖ್ಪತ್‌ನಿಂದ 76 ಕಿಲೋಮೀಟರ್ ಉತ್ತರ-ಈಶಾನ್ಯದಲ್ಲಿದೆ.ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾದ ಬಗ್ಗೆ ಜಿಲ್ಲಾಡಳಿತದಿಂದ ವರದಿಯಾಗಿಲ್ಲ.
ಭೂಕಂಪನ ಸಂಶೋಧನಾ ಸಂಸ್ಥೆಯ ದತ್ತಾಂಶದ ಪ್ರಕಾರ, ಇದಕ್ಕೂ ಮುನ್ನ, ನವೆಂಬರ್ 15ರಂದು ಗುಜರಾತ್ ನ ಪತನ್ ನ ಉತ್ತರ ಭಾಗದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿತ್ತು ಎಂದು ಹೇಳಲಾಗಿದೆ.
ಗುಜರಾತ್‌ನಲ್ಲಿ ಹೆಚ್ಚಿನ ಭೂಕಂಪದ ಅಪಾಯವಿದೆ. ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (GSDMA) ಪ್ರಕಾರ, “ಕಛ್‌ನಲ್ಲಿ ಜನವರಿ 26, 2001 ರಂದು ಸಂಭವಿಸಿದ ಭೂಕಂಪವು ಕಳೆದ ಎರಡು ಶತಮಾನಗಳಲ್ಲಿ ಭಾರತದಲ್ಲಿ ಮೂರನೇ ಅತಿದೊಡ್ಡ ಮತ್ತು ಎರಡನೇ ಅತ್ಯಂತ ವಿನಾಶಕಾರಿಯಾಗಿದೆ.”