ಕೆಲವರಿಗಂತು ಪ್ರತಿ ದಿನ ಕಾಫಿಯನ್ನು ಕುಡಿಯುವಂತ ಅಭ್ಯಾಸವಿರುತ್ತದೆ. ಹೆಚ್ಚು ಜನ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕಾಫಿಯನ್ನು ಕುಡಿದರೆ ಇನ್ನು ಕೆಲವರು ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮೈಂಡ್ ಸೆಟ್ ಇಂದ ಕುಡಿಯೋದೇ ಇಲ್ಲ. ಆದ್ರೆ ಯಾವುದೇ ಪದಾರ್ಥದಿಂದಾದ್ರೂ ದೇಹಕ್ಕೆ ಒಳಿತು ಕೆಡುಕು ಎರಡು ಕೂಡ ಇರುತ್ತದೆ ಹಾಗಾಗಿ ಎಲ್ಲವನ್ನು ಲಿಮಿಟ್ ಆಗಿ ಮಾಡಬೇಕು. ಇನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಕಾಫಿ ಕುಡಿಯುವುದರಿಂದ ಆರೋಗ್ಯ ಪ್ರಯೋಜನಗಳು ಏನೆಲ್ಲ ಇದೆ ಎಂಬುದರ ಮಾಹಿತಿ ಹೀಗಿದೆ ನೋಡಿ.
ಚಯಾಪಚಯವನ್ನು ಹೆಚ್ಚಿಸುತ್ತದೆ:
ದೇಹದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಚಯಾಪಚಯ ಕ್ರಿಯೆಯನ್ನ ಸುಧಾರಿಸುತ್ತದೆ.ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳನ್ನು ಒಳಗೊಂಡಿರುವುದರಿಂದ ಮನುಷ್ಯನ ತೂಕವನ್ನು ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ಇನ್ನು ಹೊಟ್ಟೆ ಹಸಿವಿನ ಪ್ರಕ್ರಿಯೆಯು ನಿಯಂತ್ರಣಕ್ಕೆ ಬರುತ್ತದೆ.
ದೀರ್ಘಕಾಲದ ಕಾಯಿಲೆಗಳನ್ನು
ಕಾಫಿ ಕುಡಿಯುವುದರಿಂದ ಕಾಡುವಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.ಅದರಲ್ಲಿ ಮುಖ್ಯವಾಗಿ ಟೈಪ್ 2 ಡಯಾಬಿಟಿಸ್, ಪಾರ್ಕಿನ್ಸನ್ ಕಾಯಿಲೆ, ಆಲ್ಝೈಮರ್ನ ಕಾಯಿಲೆ ಮತ್ತು ಇತ್ತೀಚಿಗೆ ಹೆಚ್ಚು ಜನಕ್ಕೆ ಕಾಡುವಂತಹ ಕಾನ್ಸರ್ ಕಾಯಿಲೆಯನ್ನು ತಡೆಗಟ್ಟುತ್ತದೆ.
ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ
ಇತ್ತೀಚಿನ ದಿನಗಳಲ್ಲ್ಲಿ ೩೦ ವರ್ಷ ಆಯ್ತು ಅಂದ್ರೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಶುರುವಾಗುತ್ತದೆ. ಹಾರ್ಟ್ ಅಟ್ಯಾಕ್ ಅನ್ನುವಂತದ್ದು ತುಂಬಾನೇ ಕಾಮನ್ ಆಗಿದೆ. ಹಾಗಾಗಿ ಪ್ರತಿದಿನ ಒಂದು ಅಥವಾ ಎರಡು ಕಪ್ ಅಷ್ಟು ಕಾಫಿ ಕುಡಿಯುವುದು ಉತ್ತಮ. ಇದರಿಂದ ಪಾರ್ಶ್ವವಾಯು, ಹೃದಯ ವೈಫಲ್ಯ ಮತ್ತು ಇತರ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.