ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಅನ್ನೋ ಆರೋಪದಲ್ಲಿ ಬಿಜೆಪಿ ಪರಿಷತ್ ಸದಸ್ಯ ಸಿ.ಟಿ ರವಿಯನ್ನು ಬಂಧನ ಮಾಡಲಾಗಿತ್ತು. ಆದರೆ 24 ಗಂಟೆ ಕಳೆಯುವ ಮುನ್ನವೇ ಹೈಕೋರ್ಟ್ ಜಾಮೀನು ನೀಡಿದ್ದು, ರಾಜ್ಯ ಸರ್ಕಾರಕ್ಕೆ ಮುಜುಗರದ ವಿಚಾರ ಎಂದೇ ಬಣ್ಣಿಸಲಾಗುತ್ತಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಸಿ.ಟಿ ರವಿಗೆ ಜಾಮೀನು ವಿಚಾರದಲ್ಲಿ ನಾನು ಕೋರ್ಟ್ ಅಲ್ಲ, ಏನು ಸೆಕ್ಷನ್ ಹಾಕಿದ್ದಾರೆ..? ಸರ್ಕಾರ ಹಾಗೂ ಪೊಲೀಸರು ಏನ್ ಸೆಕ್ಷನ್ ಹಾಕಿದ್ದಾರೆ ಗೊತ್ತಿಲ್ಲ. ನನಗೆ ಗೊತ್ತಿಲ್ಲ, ಯಾವುದೇ ಸಂಬಂಧ ಇಲ್ಲ ಎನ್ನುವ ಮೂಲಕ ಅಂತರ ಕಾಯ್ದುಕೊಂಡಿದ್ದಾರೆ.
ಸಿ.ಟಿ ರವಿ ಬಂಧನ ಪ್ರಕರಣದಲ್ಲಿ ಪೊಲೀಸರು ಉಂಟು, ಕಾನೂನು ಉಂಟು ಎಂದಿರುವ ಡಿ.ಕೆ ಶಿವಕುಮಾರ್, ಈ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಸಂಚು ಎನ್ನಲಾಗ್ತಿದೆ. ಇದರಲ್ಲಿ ನಮ್ಮದು ಯಾವುದೂ ಇನ್ವಾಲ್ಮೆಂಟ್ ಇಲ್ಲ ಎಂದಿದ್ದಾರೆ.