ವಿಧಾನ ಪರಿಷತ್ ನಲ್ಲಿ ಅಂಬೇಡ್ಕರ್ (Ambedkar) ಅವರ ಕುರಿತು ಅಮಿತ್ ಶಾ (Amit shah) ನೀಡಿದ ಹೇಳಿಕೆ ಕುರಿತು ಕಾಂಗ್ರೆಸ್ (Congress) ವತಿಯಿಂದ ಪ್ರತಿಭಟನೆ ನಡೆಯುವಾಗ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಮತ್ತು ಎಂಎಲ್ಸಿ ಸಿಟಿ ರವಿ (CT Ravi) ವಿರುದ್ಧ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸಿಟಿ ರವಿಯವರು ರಾಹುಲ್ ಗಾಂಧಿ (Rahul gandhi) ಡ್ರಗ್ ಅಡಿಕ್ಟ್ ಎಂದು ಕೂಗಿದ್ದಾರೆ.

ಅದಕ್ಕೆ ಪ್ರತಿಯಾಗಿಯಾಗಿ ಲಕ್ಷ್ಮಿ ಹೆಬ್ಬಾಳಕರ್, ಹಾಗಿದ್ರೆ ಅಮಿತ್ ಶಾ (ಅಮಿತ್ shah ) ಅವರನ್ನು ಕೊಲೆಗಡುಕ ಎನ್ನಬಹುದೇ ಎಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವೇಳೆ ಎಂಎಲ್ಸಿ ಸಿ.ಟಿ ರವಿ ಲಕ್ಷ್ಮಿ ಹೆಬ್ಬಳ್ಳಾರ್ ಅವರ ವಿರುದ್ಧ ಪ್ರೊಸ್ಟಿಟ್ಯೂಟ್ (ವೇಶ್ಯೆ) (Prostitute) ಎಂಬ ಪದ ಬಳಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಾಳಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಸಭಾಪತಿ ಬಸವರಾಜ ಹೊರಟ್ಟಿ ಅವರ ಗಮನಕ್ಕೂ ತಂದಿದ್ದು ಸಿಟಿ ರವಿ ಪದಚ್ಯುತಿಗೆ ಆಗ್ರಹಿಸಿದ್ದಾರೆ.
ಆದ್ರೆ ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಸಿಟಿ ರವಿ, ನಾನು ಆ ರೀತಿ ಮಾತಾಡಲ್ಲ,ವಿಷಯಾಂತರ ಮಾಡಲು ಕಾಂಗ್ರೆಸ್ ನವರು ಈ ರೀತಿ ಹೇಳ್ತಿದ್ದಾರೆ.ಹೆಣ್ಣುಮಕ್ಕಳ ಮೇಲೆ ನನಗೆ ಗೌರವ ಇದೆ. ಇಂಥದಕ್ಕೆಲ್ಲಾ ನಾನು ಹೆದರುವವನಲ್ಲ ಎಂದು ಹೇಳಿದ್ದಾರೆ.