ಅಪರಿಚಿತ ವಾಹನ ಡಿಕ್ಕಿಯಾದ ಕಾರಣ ಗಂಡು ಜಿಂಕೆ (Male deer) ಸಾವನ್ನಪಿರುವ ಘಟನೆ ಕೊಂಡಾಗಿನಲ್ಲಿ (Kodagu) ನಡೆದಿದ್ದು, ಅಪಘಾತದಲ್ಲಿ ಜಿಂಕೆ ಮೃತಪಟ್ಟಿದೆ.ಕೊಡಗಿನ ಹಾರಂಗಿ-ಅತ್ತೂರು ಮಾರ್ಗದಲ್ಲಿ ಈ ಘಟನೆ ನಡೆದಿದೆ. ಕೊಡಗು ಜಿಲ್ಲೆ ಕುಶಾಲನಗರ (Kushalanagar) ತಾಲೂಕಿನ ಅತ್ತೂರು ಸಮೀಪ ವೇಗವಾಗಿ ಬಂದ ವಾಹನ ಜಿಂಕೆಗೆ ಗುದ್ದಿದ ಕಾರ ಈ ಘಟನೆ ಸಂಭವಿಸಿದೆ.
ಆದ್ರೆ ಅಪಘಾತ ಮಾಡಿ ಎಸ್ಕೇಪ್ ಆಗಿರುವ ವಾಹನದ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ.ರಸ್ತೆ ಬದಿಯಲ್ಲಿ ಜಿಂಕೆ ಮೃತದೇಹ ಕಂಡುಬಂದಿದ್ದು, ಅಂದಾಜು 4-5 ವರ್ಷ ಪ್ರಾಯದ ಗಂಡು ಜಿಂಕೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಜಿಂಕೆಯ ಮೃತದೇಹ ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿಟ್ ಅಂಡ್ ರನ್ (Hit & run) ಮಾಡಿರುವ ವಾಹನ ಪತ್ತೆಗೆ ಕ್ರಮ ಅಧಿಕಾರಿಗಳು ಕ್ರಮ ವಹಿಸಿದ್ದಾರೆ.