ಬೆಂಗಳೂರು:ನಟ ಶಿವರಾಜ್ ಕುಮಾರ್ ಕಂಡ್ರೆ ಕಿಚ್ಚ ಸುದೀಪ್ ಗೆ ಎಲ್ಲಿಲ್ಲದ ಪ್ರೀತಿ..ದಿ ವಿಲನ್ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ನಟಿಸಿ ಸಿನಿಪ್ರಿಯರ ಗಮನ ಸೆಳೆದಿದ್ರು. ಕಿಚ್ಚ-ಶಿವಣ್ಣ ನಡುವೆ ದೊಡ್ಡ ಸ್ನೇಹವೆ ಇದೆ. ಸದ್ಯ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಶಿವಣ್ಣ ಚಿಕಿತ್ಸೆಗಾಗಿ ಅಮೆರಿಕಾಗೆ ಪ್ರಯಾಣ ಬೆಳೆಸುತ್ತಿರುವ ಹಿನ್ನೆಲೆ ಇವತ್ತು ಹ್ಯಾಟ್ರಿಕ್ ಹೀರೋ ಮನೆಗೆ ಕಿಚ್ಚ ಸುದೀಪ್ ತೆರಳಿ ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ.
ಶಿವಣ್ಣರನ್ನ ಬಿಗಿದಪ್ಪಿಕೊಂಡು ಹುಷಾರಾಗಿ ಬರುವಂತೆ ಆಶಿಸಿದ್ದಾರೆ. ಶಿವಣ್ಣ ಮನೆಯಲ್ಲಿ 1 ಗಂಟೆಗೂ ಹೆಚ್ಚು ಕಾಲ ಕಾಲ ಕಳೆದ ಕಿಚ್ಚ ಸುದೀಪ, ಆರೋಗ್ಯದ ಬಗ್ಗೆ ಅಪ್ಡೇಟ್ ಪಡೆದುಕೊಂಡಿದ್ದಾರೆ.ಶಿವಣ್ಣ ಬಾಮೈದ ಮಧು ಬಂಗಾರಪ್ಪ ಕೂಡ ಜತೆಗಿದ್ದು ಮಾತಾಡಿದ್ದಾರೆ. ಕೌರವ ಬಿಸಿ ಪಾಟೀಲ್ ಕೂಡ ಇದೆ ವೇಳೆ ಮನೆಗೆ ಭೇಟಿ ಕೊಟ್ಟಿದ್ದು, ಶಿವಣ್ಣ ಆರೋಗ್ಯ ವಿಚಾರಿಸಿದ್ದಾರೆ.
ಅಮೆರಿಕದ ಮಿಯಾಮಿಯಲ್ಲಿ ಶಿವಣ್ಣನಿಗೆ ಆಪರೇಷನ್ ನಿಗದಿಯಾಗಿದೆ. ಸರಿಸುಮಾರು ಒಂದೂವರೆ ತಿಂಗಳು ಶಿವಣ್ಣ ಹಾಗೂ ಗೀತಕ್ಕ ಅಲ್ಲಿಯೇ ಉಳಿಯಲಿದ್ದಾರೆ. ಫೆಬ್ರವರಿ ಮೊದಲ ವಾರದಲ್ಲಿ ಬೆಂಗಳೂರಿಗೆ ವಾಪಸ್ ಬರುವ ಸಾಧ್ಯತೆ ಇದೆ. ಮೇ ನಂತರ ಶಿವಣ್ಣ ಮತ್ತೆ ಶೂಟಿಂಗ್ ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.ಇನ್ನೂ ಅಮೆರಿಕಾಗೆ ತೆರಳುವ ಮುನ್ನ ಶಿವಣ್ಣ ಮನೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.ಆರೋಗ್ಯ ವೃದ್ಧಿಯಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.
ಅಮೆರಿಕಾಗೆ ಹೋಗುವ ಮುನ್ನ ಶಿವರಾಜ್ ತಮ್ಮ ನಿವಾಸದಲ್ಲಿ ಪೂಜೆ ಮಾಡಿಸಿದ್ದಾರೆ. ಈ ಪೂಜಾ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ (Kiccha Sudeep), ಮಾಜಿ ಸಚಿವ ಬಿಸಿ ಪಾಟೀಲ್, ಸಚಿವ ಮಧು ಬಂಗಾರಪ್ಪ, ನಿರ್ಮಾಪಕ ಕಾರ್ತಿಕ್ ಗೌಡ ಸೇರಿದಂತೆ ಸೇರಿದಂತೆ ಚಿತ್ರರಂಗ, ರಾಜಕೀಯದ ಸ್ನೇಹಿತರು ಶಿವರಾಜ್ ಕುಮಾರ್ ನಿವಾಸಕ್ಕೆ ಬಂದು ಶೀಘ್ರ ಗುಣಮುಖರಾಗಲಿ ಎಂದು ಶುಭ ಹಾರೈಸಿದ್ದಾರೆ.