ಚಿತ್ರದುರ್ಗ:ರೇಣುಕಾಸ್ವಾಮಿ ಹತ್ಯೆ ಕೇಸ್ ಆರೋಪಿಗಳಿಗೆ ಹೈಕೋರ್ಟ್‌ನಲ್ಲಿ ಜಾಮೀನು ಸಿಕ್ಕರೂ ಶ್ಯೂರಿಟಿ ಸಿಗದೆ ಪರದಾಡುತ್ತಿದ್ದಾರೆ. ಶ್ಯೂರಿಟಿ ಹಾಕುವವರು ಸಿಗದೇ ಆರೋಪಿ ಜಗದೀಶ್ ಕುಟುಂಬ ಪರದಾಡುವಂತಾಗಿದೆ. ಶ್ಯೂರಿಟಿಗಾಗಿ ಅಲೆದು ಸುಸ್ತಾದ ಜಗದೀಶ್ ಮಾವ ಓಬಳೇಶ್ ಹೇಳಿದ್ದಾರೆ.
ದರ್ಶನ್ ಅಭಿಮಾನಿ ಅಂತ ಹೋದ ಜಗದೀಶ್‌ಗೆ ಈವರೆಗೆ ಯಾರೂ ಸಹಾಯ ಮಾಡ್ತಿಲ್ಲ. ಯಾರೂ ಹಣಕಾಸಿನ ಸಹಾಯ ಮಾಡಿಲ್ಲ.ನಮ್ಮ ಲಾಯರ್ ಅವರ ಹಣದಲ್ಲಿ ಜಾಮೀನಿಗೆ ವ್ಯವಸ್ಥೆ ಮಾಡಿದ್ರು. ಯುವಕರು ಹೀಗೆ ಹೋಗಿ ನಿಮ್ಮ ಜಿವನ ಹಾಳು ಮಾಡ್ಕೋಬೇಡಿ ಎಂದು ಮನವಿ ಮಾಡಿದ್ದಾರೆ.
ಜಗದೀಶನ ಕುಟುಂಬಸ್ಥರಿಗೆ 6 ತಿಂಗಳಿಂದ ತರಕಾರಿ ತರುವುದಕ್ಕೂ ಆಗ್ತಿಲ್ಲ. ದುಡಿಯುವವರಿಲ್ಲ, ಬಡತನ, ಮಕ್ಕಳ ಫೀಸ್ ಕಟ್ಟಲೂ ಹಣ ಇಲ್ಲ. ಡಿ ಬಾಸ್ ಅಭಿಮಾನಿಗಳ್ಯಾರೂ ಇವತ್ತಿನವರೆಗೆ ಸಹಾಯಕ್ಕೆ ಬಂದಿಲ್ಲ. ಡಿ ಬಾಸ್ ಅಭಿಮಾನಿಗಳು ಈ ರೀತಿ ಜೀವನ ಹಾಳು ಮಾಡ್ಕೋಬೇಡಿ.ನಿಮ್ಮ ತಂದೆ-ತಾಯಿಗಳಿಗೆ ಬಾಸ್ ಆಗಿರಿ ನಿಮ್ಮ ಜಿವನ ಬಹಳ ಕಷ್ಟ ಆಗುತ್ತೆ ಎಂದಿದ್ದಾರೆ.
ಡಿ ಬಾಸ್ ಅಭಿಮಾನಿ ಯಾರಾದ್ರೂ ಬಂದು ಶ್ಯೂರಿಟಿ ಹಾಕಿ ಎಂದಿರುವ ಓಬಳೇಶ್, ಜಗ್ಗನನ್ನು ಜೈಲಿಂದ ಹೊರತಂದ್ರೆ ನಿಮ್ಮ ಅಭಿಮಾನ ಸಾರ್ಥಕವಾಗುತ್ತದೆ. ಅಭಿಮಾನದ ಹಿಂದೆ ಬೆನ್ನು ಹತ್ತಿ ಹೋಗಿ ಜೀವನ ಹಾಳು ಮಾಡ್ಕೊಳ್ತಿದ್ದೀರಿ ಎಂದಿ ಡಿ ಬಾಸ್ ಅಭಿಮಾನಿಗಳಿಗೆ ಎಚ್ಚರಿಸಿದ್ದಾರೆ.