ವಕ್ಫ್ ವಿಚಾರ ಅನ್ವರ್ ಮಾಣಿಪ್ಪಾಡಿಗೆ ಹಣದ ಆಮೀಷ ಒಡ್ಡಿದ್ರು ಅನ್ನೋದನ್ನು ಕಾಂಗ್ರೆಸ್ ಪ್ರಸ್ತಾಪ ಮಾಡಿತ್ತು. ಆ ಬಳಿಕ ಯು ಟರ್ನ್ ಹೊಡೆದಿದ್ದ ಅನ್ವರ್ ಮಾಣಿಪ್ಪಾಡಿ, ನನಗೆ ಯಾವುದೇ ಆಮೀಷ ಒಡ್ಡಿಲ್ಲ ಎಂದಿದ್ದರು. ಆ ನಂತರ ಅನ್ವರ್ ಮಾಣಿಪ್ಪಾಡಿ ಮಾತನ್ನಾಡಿದ್ದ ವಿಡಿಯೋ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಮಾಣಿಪ್ಪಾಡಿಯನ್ನೇ ಸಿಲುಕಿಸುವ ತಂತ್ರಗಾರಿಕೆ ಮಾಡಿತ್ತು.ಇದೀಗ ಸಂಕಷ್ಟಕ್ಕೆ ಸಿಲುಕಿದ ಅನ್ವರ್ ಮಾಣಿಪ್ಪಾಡಿ, ಸಚಿವ ಪ್ರೀಯಾಂಕ್ ಖರ್ಗೆ ವಿರುದ್ಧ ರೋಷಾವೇಶ ಪ್ರದರ್ಶನ ಮಾಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿರುವ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ಪ್ರಿಯಾಂಕ್ ಖರ್ಗೆಯವರೇ, ನನ್ನ ವರದಿ ಹೊರ ಬಂದ್ರೆ ನೀವೆಲ್ಲ ಕಾಂಗ್ರೆಸ್ ಪಕ್ಷದವರು ಕಳ್ಳರು ಅನ್ನೋದು ಹೊರ ಬರುತ್ತದೆ. ನಾನು ಉಲ್ಟಾ ಹೊಡೆಯುತ್ತಿಲ್ಲ, ನಾನು ನನ್ನ ಮಾತಿಗೆ ಬದ್ಧ. ಕಾಂಗ್ರೆಸ್‌ನವರ ಕೋಟಿ ಆಫರ್ ಬಗ್ಗೆ ವಿಜಯೇಂದ್ರ ಹೇಳಿದ್ದು ನಿಜ, ಆದರೆ ವಿಜಯೇಂದ್ರ ಯಾವತ್ತೂ ಆಫರ್ ನೀಡಿಲ್ಲ. ಕಾಂಗ್ರೆಸ್‌ನವರು ಕೇಸ್ ಕ್ಲೋಸ್ ಮಾಡಲು ಕೋಟಿ ಕೊಡಲು ಸಿದ್ದರಿದ್ದಾರಲ್ವಾ..? ಅದನ್ನು ತೆಗೊಂಡು ನೀವು ಸುಮ್ಮನೆ ಇರಿ ಅಂತ ವಿಜಯೇಂದ್ರ ಹೇಳಿದ್ದರು ಎಂದಿದ್ದಾರೆ.
ನೀವು ಇಷ್ಟು ಸಮಯ ಹೋರಾಟ ಮಾಡಿ ಕಷ್ಟದಲ್ಲಿ ಇದ್ದೀರಿ, ಹಾಗಾಗಿ ಏನಾದ್ರೂ ಆಗುತ್ತೆ, ಅವರು ಒಂದು ನಂಬರ್ಸ್ ಕೊಡಬಹುದು ಅಂದರು.ಆದರೆ ಆಗ ನನಗೆ ಕೋಪ ಬಂತು, ನಾನು ಅವರಿಗೆ ಬೈದೆ.ಬಳಿಕ ಎಲ್ಲೆಡೆ ನಾನು ವಿಜಯೇಂದ್ರಗೂ ಬೈದಿದ್ದೇನೆ.
ಆದರೆ ವಿಜಯೇಂದ್ರ ನನ್ನನ್ನು ಟೆಸ್ಟ್ ಮಾಡಲು ಹಾಗೆ ಕೇಳಿದ್ದು ಅಂತಾ ಎರಡು ಮೂರು ದಿನಗಳ ನಂತರ ಗೊತ್ತಾಯ್ತು. ನಂತರ ಕೇಸ್ ಕ್ಲೋಸ್ ಮಾಡೋದು ಬೇಡ, ಟೈಟ್ ಮಾಡೋಣ ಅಂದ್ರು. ನಾನು ಗಟ್ಟಿಯಾಗಿ ನಿಂತ ನಂತರ ಯಡಿಯೂರಪ್ಪನವರು ಮಂಡನೆ ಮಾಡಿದ್ರು. ವಿಜಯೇಂದ್ರ ಯಾವುದೇ ಆಫರ್ ಕೊಟ್ಟಿಲ್ಲ.. ಕಾಂಗ್ರೆಸ್ ಪಕ್ಷದ ಅಫರ್ ಬಗ್ಗೆ ಹೇಳಿದ್ದರು ಅಷ್ಟೇ.ಆದರೆ ನಾನು ಅದನ್ನ ಒಪ್ಪದೇ ಅವರಿಗೆ ಬೈದಿದ್ದೆ. ಅವರ ಮೇಲೂ ನಾನು ಆರೋಪ ಮಾಡಿದ್ದೆ ಎಂದಿದ್ದಾರೆ.
ನನ್ನ ವರದಿಗೆ ತಡೆ ಮಾಡಿದ ಎಲ್ಲರಿಗೂ ನಾನು ಬೈದಿದ್ದೇನೆ ಎಂದಿರುವ ಅನ್ವರ್ ಮಾಣಿಪ್ಪಾಡಿ, ನನ್ನ ವರದಿಯ ಭಯ ಇರೋದು ಕಾಂಗ್ರೆಸ್‌ನವರಿಗೆ. ನಾನು ಇದ್ರಿಂದ ಹೊರ ಬಂದ್ರೆ ಕಾಂಗ್ರೆಸ್‌ನವರು ನನ್ನನ್ನು ಮಿಲಿಯನೇರ್ ಮಾಡ್ತಾರೆ. ಅವರು ಮಂಡನೆ ಮಾಡದಿದ್ರೆ ನಾನೇ ಪಿಡಿಎಫ್ ಮಾಡಿ ಜನ ಸಾಮಾನ್ಯರಿಗೆ ಎಲ್ಲರಿಗೂ ಸಿಗುವಾಗೆ ಮಾಡ್ತೇನೆ ಎಂದಿದ್ದಾರೆ. ಸರ್ಕಾರ ವರದಿಯನ್ನು ಯಾರಿಗೂ ಈಗ ಕೊಡುತ್ತಿಲ್ಲ. 7 ಸಾವಿರ ಪುಟದ ನನ್ನ ವರದಿಯಲ್ಲಿ ನಿಮಗೆ ಯಾರಿಗೂ ತಪ್ಪಿಸಲು ಆಗಲ್ಲ. ಕಲಬುರಗಿಲ್ಲಿ ನಿಮ್ಮ ಅಪ್ಪಾಜಿ ಎಷ್ಟು ಬೇನಾಮಿ ಆಸ್ತಿ ಮಾಡಿದ್ದಾರೆ. ಕಲಬುರಗಿಯ ಏಷ್ಯನ್ ಮಾಲ್ ಯಾರದ್ದು..? 800 ಪ್ಲಾಟ್ ಯಾರದ್ದು..? ಕಾಂಗ್ರೆಸ್‌ನವರು ಎಲ್ಲರೂ ಅದರಲ್ಲಿ ಪಾಲುದಾರರಲ್ಲವೇ..? ಬೆಂಗಳೂರಿನ ಐಟಿಸಿ ಹೋಟೇಲ್ ಯಾರದ್ದು..? ಅಂತಾನೂ ಪ್ರಿಯಾಂಕ್ ಖರ್ಗೆಗೆ ಕೌಂಟರ್ ಕೊಟ್ಟಿದ್ದಾರೆ.
ನನ್ನ ವರದಿಯಿಂದ ನಿಮ್ಮ ಎಲ್ಲಾ ಅಕ್ರಮ ಹೊರ ಬೀಳುತ್ತದೆ ಎಂದಿರುವ ಅನ್ವರ್ ಮಾಣಿಪ್ಪಾಡಿ, ನಾವು ಸತ್ಯದಿಂದ ಹೋಗಿದ್ದಕ್ಕೆ ನಿಮ್ಮಂತವರು ಸಿಕ್ಕಿಬಿದ್ದಿದ್ದಾರೆ. 2 ಲಕ್ಷದ 30 ಕೋಟಿಯಷ್ಟನ್ನು ಕಾಂಗ್ರೆಸ್‌ನವರು ಕಬ್ಜಾ ಮಾಡಿದ್ದಾರೆ. ನನ್ನ ವರದಿಯನ್ನು ಕಾಂಗ್ರೆಸ್‌ನವರು ಒಪ್ಪಲು ಸಾಧ್ಯವಿಲ್ಲ. ಪ್ರಿಯಾಂಕ್ ಖರ್ಗೆ ಅಪ್ಪಾಜಿ ಮಿಸ್ಟರ್ ಸೀನಿಯರ್ ಖರ್ಗೆ ಕೂಡಾ ಸಿಕ್ಕಿ ಬೀಳ್ತಾರೆ ಎಂದಿದ್ದಾರೆ. ನನ್ನ ವರದಿಯನ್ನ ಲೋಕಾಯುಕ್ತ ಒಪ್ಪಿದೆ, ಹೈಕೋರ್ಟ್, ಸುಪ್ರೀಂಕೋರ್ಟ್ ಕೂಡ ಒಪ್ಪಿದೆ. ಅವರಿಗಿಂತ ದೊಡ್ಡವರು ನೀವಾ..? ನಿಮ್ಮಂತ ಕಳ್ಳರು ಯಾಕೆ ಊರಲ್ಲಿ ಇದ್ದೀರಾ..? ಕಾಂಗ್ರೆಸ್‌ನವರು ಎಷ್ಟೆಷ್ಟು ನುಂಗಿದ್ದೀರಿ ಅಂತ ನನ್ನ ವರದಿಯಲ್ಲಿ ಇದೆ. ಬಹಳ ವರ್ಷದಿಂದ ಲೂಟಿ ಮಾಡಿಕೊಂಡು ಬಂದವರು ಕಾಂಗ್ರೆಸ್‌ನವರು. ಈಗಲಾದರೂ ಅಲ್ಪ ಸಂಖ್ಯಾತರ ಕ್ಷಮೆ ಕೇಳಿ ಎಂದು ಆಗ್ರಹಿಸಿದ್ದಾರೆ.