ಡಿ. ಗುಕೇಶ್, 18 ವರ್ಷದ ಭಾರತೀಯ ಚೆಸ್ ಪ್ರತಿಭೆ, ಇತಿಹಾಸ ನಿರ್ಮಿಸಿ ಕಿರಿಯ ವಯಸ್ಸಿನಲ್ಲೇ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ.ಚಾಂಪಿಯನ್ಶಿಪ್ ಪಂದ್ಯಾವಳಿಯ ನಿರ್ಣಾಯಕ 14ನೇ ಆಟದಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು 7.5-6.5 ಅಂತರದಲ್ಲಿ ಸೋಲಿಸುವ ಮೂಲಕ ಈ ಮಹತ್ತರ ಸಾಧನೆ ಸಾಧಿಸಿದ್ದಾರೆ.
ಗುಕೇಶ್ ಅವರ ಜಯವು ಅವರ ಸಮರ್ಪಣೆ, ಶ್ರಮ ಮತ್ತು ಆಟದ ಮೇಲಿನ ಪ್ರೀತಿಯನ್ನು ಸಾರುತ್ತದೆ. ಕೇವಲ 7ನೇ ವಯಸ್ಸಿನಲ್ಲಿ ಚೆಸ್ ಆಟ ಪ್ರಾರಂಭಿಸಿದ ಅವರು, 12ನೇ ವಯಸ್ಸಿನಲ್ಲಿ ಗ್ರ್ಯಾಂಡ್ಮಾಸ್ಟರ್ ಹುದ್ದೆ ಗಳಿಸಿದರು. ಅವರ ಈ ಸಾಧನೆ ಭಾರತಕ್ಕೆ ಹೆಮ್ಮೆ ತರುವಂತಾಗಿದ್ದು, ಅನೇಕ ಯುವ ಚೆಸ್ ಆಟಗಾರರಿಗೆ ಪ್ರೇರಣೆಯಾಗಲಿದೆ.
ಗುಕೇಶ್ ಅವರ ಸಾಧನೆಗೆ ಗೌರವ ಸಲ್ಲಿಸಲು ತಮಿಳುನಾಡು ಸರ್ಕಾರ ಭವ್ಯ ಸನ್ಮಾನ ಸಮಾರಂಭವನ್ನು ಆಯೋಜಿಸಿತು. ’18ನೇ ವಯಸ್ಸಿನಲ್ಲಿ 18ನೇ ಸಾಧನೆ’ ಎಂಬ ಶೀರ್ಷಿಕೆಯಡಿ ನಡೆದ ಈ ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಗುಕೇಶ್ ಅವರಿಗೆ 5 ಕೋಟಿಯ ಚೆಕ್ ಪ್ರಧಾನ ಮಾಡಿದರು. ಇದೇ ವೇಳೆ ತಮಿಳುನಾಡು ಸರ್ಕಾರ ಕ್ರೀಡಾ ಕ್ಷೇತ್ರದ ಉನ್ನತಿಗಾಗಿ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸುತ್ತಾ, ಮುಂದಿನ ಪ್ರತಿಭೆಗಳನ್ನು ತರಬೇತಿ ನೀಡಲು ವಿಶೇಷ ಚೆಸ್ ತರಬೇತಿ ಕೇಂದ್ರ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿತು.
ಗುಕೇಶ್ ಅವರ ಯಶಸ್ಸು ಕುಟುಂಬದ ಬೆಂಬಲ ಮತ್ತು ಅವರ ಶಿಕ್ಷಕರ ಮಾರ್ಗದರ್ಶನದ ಫಲವಾಗಿದೆ. ಅವರ ತಂದೆ ಡಿ. ರಜನೀಕಾಂತ್ ಚೆಸ್ ಪ್ರೇಮಿಯಾಗಿದ್ದು, ಗುಕೇಶ್ ಅವರಿಗೆ ಚೆಸ್ ಕಲಿಸಿದರು. ತಾಯಿ ಪದ್ಮಾ ಸದಾ ಬೆಂಬಲ ನೀಡಿ, ಸ್ಪರ್ಧೆಗಳಿಗೆ ಹೋಗುವಾಗ ನಿಂತು ಸಹಕಾರ ನೀಡಿದ್ದಾರೆ.ಗುಕೇಶ್ ಅವರ ಈ ಸಾಧನೆಯು ಭಾರತದಲ್ಲಿ ಚೆಸ್ ಆಟದ ಮೇಲಿನ ಆಸಕ್ತಿಯನ್ನು ಪುನರಜೀವಗೊಳಿಸಿದೆ.
ಈ ಆಟವು ಭಾರತದಲ್ಲಿ ಮಹತ್ತರ ಪ್ರಾಮುಖ್ಯತೆಯನ್ನು ಹೊಂದಿದ್ದು, ಗುಕೆಶ್ ಅವರ ಯಶಸ್ಸು ಮುಂದಿನ ತಲೆಮಾರಿನ ಚೆಸ್ ಆಟಗಾರರಿಗೆ ಸ್ಪೂರ್ತಿಯಾದಂತಾಗಿದೆ. ಅವರ ಸಾಧನೆ ನಿರಂತರವಾಗಿ ನಮ್ಮ ದೇಶದ ಕೀರ್ತಿಯನ್ನು ವೃದ್ಧಿಸುತ್ತಲಿದ್ದು, ದೇಶದ ಯುವಕ-ಯುವತಿಯರಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತಿದೆ.