ಪುಷ್ಪ ೨ ಬಿಗ್ ಸಕ್ಸಸ್ ನ (Pushpa 2) ಸಂತಸದಲ್ಲಿದ್ದ ನಟ ಅಲ್ಲು ಅರ್ಜುನ್ ಗೆ (Allu arjun) ದೊಡ್ಡ ಶಾಕ್ ಎದುರಾಗಿದೆ. ಹೈದರಾಬಾದ್ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದಾರೆ.
ಪುಷ್ಪ ೨ ರಿಲೀಸ್ ಸಂದರ್ಭದಲ್ಲಿ ಹೈದರಾಬಾದ್ನ ಸಂಧ್ಯಾ ಥಿಯೇಟರ್ (Sandhya theatre) ಬಳಿ ಕಾಲ್ತುಳಿತದ ಪ್ರಕರಣದಲ್ಲಿ ಪೊಲೀಸರು ಅಲ್ಲು ಅರ್ಜುನ್ ರನ್ನ ಅರೆಸ್ಟ್ ಮಾಡಿದ್ದಾರೆ. ಸದ್ಯ ಅರ್ಜುನ್ ಅವರನ್ನು ಚಿಕ್ಕಡಪಲ್ಲಿ ಠಾಣೆಗೆ ಕರೆದೊಯ್ಯಲಾಗಿದೆ.
ಈ ಹಿಂದೆ ಸಿನಿಮಾದ ಪ್ರೀಮಿಯರ್ ಶೋ (Pushpa premier show) ವೇಳೆ ನಡೆದ ಅವಘಡಕ್ಕೆ ಅಲ್ಲು ಅರ್ಜುನ್ ರನ್ನ ಹೊಣೆಗಾರರನ್ನಾಗಿಸಿ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪುಷ್ಪಾ 2 ಸಿನಿಮಾದ ಪ್ರೀಮಿಯರ್ ಶೋ ವೇಳೆ ಹೈದಾರಾಬಾದ್ನ ಚಿತ್ರಮಂದಿರದ ಬಳಿ ನಡೆದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ ಘಟನೆಯಲ್ಲಿ ಅಲ್ಲು ಅರ್ಜುನ್ ರನ್ನ ಬಂಧಿಸಲಾಗಿದೆ.
ಈ ಘಟನೆಗೆ ಪರೋಕ್ಷವಾಗಿ ನಟ ಅಲ್ಲು ಅರ್ಜುನ್ ಕಾರಣವಾಗಿದ್ದಾರೆ. ಏಕೆಂದರೆ ಯಾವುದೇ ಮುನ್ಸೂಚನೆ ನೀಡದೆ ಈ ಚಿತ್ರ ಮಂದಿರಕ್ಕೆ ಪ್ರೀಮಿಯರ್ ಶೋ ನೋಡಲು ಅಲ್ಲು ಅರ್ಜುನ್ ಆಗಮಿಸಿದ್ದಕ್ಕೆ ಈ ಘಟನೆ ಜರುಗಿದೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.