ಟೆಕ್ಸಾಸ್ ಅಮೆರಿಕದ ಟೆಕ್ಸಾಸ್ನಲ್ಲಿ ಎರಡು ಇಂಜಿನ್ಗಳ ಚಿಕ್ಕ ವಿಮಾನವೊಂದು ರನ್ವೇ ಬದಲಿಗೆ ರಸ್ತೆಗೆ ಇಳಿದಿದೆ.ರಸ್ತೆಗೆ ಇಳಿದ ತಕ್ಷಣ ವಿಮಾನ ಎರಡು ತುಂಡಾಯಿತು.ಅಪಘಾತದಲ್ಲಿ 4 ಮಂದಿ ಗಾಯಗೊಂಡಿದ್ದಾರೆ.ರಸ್ತೆಯಲ್ಲಿ ಚಲಿಸುತ್ತಿದ್ದ ಮೂರು ಕಾರುಗಳಿಗೂ ವಿಮಾನ ಡಿಕ್ಕಿ ಹೊಡೆದಿದೆ.
ಅಪಘಾತದ ಬಳಿಕ ವಿಮಾನದ ಅವಶೇಷಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ನಾಲ್ವರು ಗಾಯಗೊಂಡಿದ್ದು, ಮೂವರ ಸ್ಥಿತಿ ಅಪಾಯದಿಂದ ಪಾರಾಗಿದೆ. ಅಪಘಾತಕ್ಕೀಡಾದ ಸಣ್ಣ ವಿಮಾನವು ಎರಡು ಪ್ರೊಪೆಲ್ಲರ್ ಎಂಜಿನ್ಗಳನ್ನು ಹೊಂದಿತ್ತು. ದಕ್ಷಿಣ ಟೆಕ್ಸಾಸ್ ನಗರದ ವಿಕ್ಟೋರಿಯಾದಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆಗೆ ರಾಜ್ಯ ಹೆದ್ದಾರಿ ಲೂಪ್ 463 ರಲ್ಲಿ ಅಪಘಾತ ಸಂಭವಿಸಿದೆ. ನಾಲ್ವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಮೂವರ ಪ್ರಾಣ ಅಪಾಯದಿಂದ ಪಾರಾಗಿದೆ. ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ.
https://twitter.com/rawsalerts/status/1866988078042165345?t=n31sY9F-e-0cA8hmUjEHdw&s=19
ವಿಮಾನ ಪತನದ ದೃಶ್ಯವನ್ನು ರಸ್ತೆಯಲ್ಲಿದ್ದ ವೀಕ್ಷಕರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇದರಲ್ಲಿ ವಿಮಾನವು ರಸ್ತೆಗೆ ಇಳಿದ ನಂತರ ಎರಡು ತುಂಡಾಗಿರುವ ಪರಿಸ್ಥಿತಿಯನ್ನು ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ. ವಿಮಾನವು ಅತ್ಯಂತ ಕಡಿಮೆ ಎತ್ತರದಲ್ಲಿ ಹಾರುತ್ತದೆ ಮತ್ತು ರಸ್ತೆಯ ಮೇಲೆ ಇಳಿಯುತ್ತದೆ. ಮರುಕ್ಷಣವೇ ಅದು ಎರಡು ತುಂಡಾಗಿ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗುತ್ತದೆ.
ಅಪಘಾತಕ್ಕೆ ಬಲಿಯಾದ ವಿಮಾನವು ಅವಳಿ ಎಂಜಿನ್ ಪೈಪರ್ ಪಿಎ -31 ಆಗಿತ್ತು.ವಿಕ್ಟೋರಿಯಾ ಪೊಲೀಸ್ ಇಲಾಖೆ ಮತ್ತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಅಪಘಾತದ ತನಿಖೆಯನ್ನು ಪ್ರಾರಂಭಿಸಿದೆ.