• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿರಿಯಾ ವಶಪಡಿಸಿಕೊಂಡಿರುವ ಬಂಡುಕೋರ ಜುಲಾನಿ ಯಾರು ಗೊತ್ತಾ ?

ಪ್ರತಿಧ್ವನಿ by ಪ್ರತಿಧ್ವನಿ
December 9, 2024
in Top Story, ಇತರೆ / Others
0
ಸಿರಿಯಾ ವಶಪಡಿಸಿಕೊಂಡಿರುವ ಬಂಡುಕೋರ ಜುಲಾನಿ ಯಾರು ಗೊತ್ತಾ ?
Share on WhatsAppShare on FacebookShare on Telegram

ಡಮಾಸ್ಕಸ್: ಸಿರಿಯಾದಲ್ಲಿ ಪ್ರಮುಖ ರಾಜಕೀಯ ಬದಲಾವಣೆ ಉಂಟಾಗಿದ್ದು ಅದ್ಯಕ್ಷ ಬಷರ್ ಅಲ್-ಅಸ್ಸಾದ್ ಅಧಿಕಾರವನ್ನು ಕಳೆದುಕೊಂಡಿದ್ದು, ಭಾನುವಾರ ದೇಶದಿಂದ ಪಲಾಯನ ಮಾಡಿರುವುದಾಗಿ ವರದಿಯಾಗಿದೆ. ಇನ್ನು, ಡಮಾಸ್ಕಸ್ ಸೇರಿದಂತೆ ಹಲವು ಮುಖ್ಯ ಪ್ರದೇಶಗಳನ್ನು ವಶಕ್ಕೆ ಪಡೆದಿರುವ ಹಯಾತ್ ತಹ್ರಿರ್ ಅಲ್-ಶಾಮ್ (ಎಚ್‌ಟಿಎಸ್) ಗುಂಪು, “ಹೊಸ ಯುಗದ ಆರಂಭ” ಎಂದು ಘೋಷಣೆ ಮಾಡಿದೆ. ಈ ಬೆಳವಣಿಗೆಯೊಂದಿಗೆ, ಎಚ್‌ಟಿಎಸ್ ನಾಯಕ ಅಬು ಮೊಹಮ್ಮದ್ ಅಲ್-ಜುಲಾನಿಯ ಮುಂದಿನ ಚಲನೆಗಳ ಮೇಲೆ ಜಗತ್ತಿನ ಗಮನ ಸೆಳೆದಿದೆ. ಒಮ್ಮೆ ಐಸಿಸ್ ಮುಖ್ಯಸ್ಥ ಅಬು ಬಕರ್ ಅಲ್-ಬಾಗ್ದಾದಿಯೊಂದಿಗೆ ಕಾರ್ಯನಿರ್ವಹಿಸಿದ್ದ ಜುಲಾನಿಯ ಮುಂದೆ ನಡೆ ಏನಾಗಲಿದೆ ಎಂಬ ಕುತೂಹಲವಿದೆ.

ADVERTISEMENT

ಎಚ್‌ಟಿಎಸ್, ಈ ಹಿಂದಿನ ಅಲ್-ನುಸ್ರಾ ಫ್ರಂಟ್ ಎಂದೇ ಹೆಸರಾಗಿದ್ದ ಈ ಸಂಘಟನೆ, ಅಲ್-ಖೈದಾ ಜೊತೆ ಸೇರಿ ಕಾರ್ಯಾಚರಣೆ ನಡೆಸುತ್ತಿದ್ದು, ಇತ್ತೀಚೆಗೆ ಸಿರಿಯಾದ ಉತ್ತರ ಪ್ರದೇಶಗಳಲ್ಲಿ ಬೃಹತ್ ದಾಳಿಗಳನ್ನು ನಡೆಸಿ ಅಲೆಪ್ಪೊ ಮತ್ತು ಹಮಾ ಮುಂತಾದ ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿದೆ.ಇದರಿಂದಾಗಿ ಡಮಾಸ್ಕಸ್ ನಗರವನ್ನೂ ಅವರ ಹಿಡಿತಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಿರಿಯಾದ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಈ ಸಂದರ್ಭದಲ್ಲಿ ಎಲ್ಲಿದ್ದಾರೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಈ ಮಧ್ಯೆ, ಭಯೋತ್ಪಾದಕ ಸಂಘಟನೆಯೆಂದು ಅಮೆರಿಕದಲ್ಲಿ ಘೋಷಿಸಲ್ಪಟ್ಟಿರುವ ಎಚ್‌ಟಿಎಸ್ ನಡೆಸುತ್ತಿರುವ ಹಿಂಸಾತ್ಮಕ ಕಾರ್ಯಾಚರಣೆಗಳು ಜಗತ್ತಿನ ಗಮನ ಸೆಳೆಯುತ್ತಿವೆ.ಎಚ್‌ಟಿಎಸ್ ನಾಯಕರಾಗಿರುವ ಅಬು ಮೊಹಮ್ಮದ್ ಅಲ್-ಜುಲಾನಿ ಅವರನ್ನು “ವಿಶೇಷ ಜಾಗತಿಕ ಭಯೋತ್ಪಾದಕ” ಎಂದು ಘೋಷಿಸಲಾಗಿದ್ದು, ಅವರ ತಲೆಗೆ 10 ಮಿಲಿಯನ್ ಡಾಲರ್ ಬಹುಮಾನವಿದೆ.

Belagavi Winter Session:  ಸದನದಲ್ಲಿ ಮುಗಿಲು ಮುಟ್ಟಿದ ಬಿಜೆಪಿ ಕಾಂಗ್ರೆಸ್ ಜಗಳ #pratidhvani

ಅಹ್ಮದ್ ಹುಸೇನ್ ಅಲ್-ಶರಾ ಎಂಬ ತಾತ್ಕಾಲಿಕ ಹೆಸರಿನಲ್ಲಿರುವ ಜುಲಾನಿ, ಮೊಹಮ್ಮದ್ ಅಲ್-ಜವ್ಲಾನಿ ಎಂಬ ಹೆಸರಿನಿಂದಲೂ ಪ್ರಸಿದ್ಧರಾಗಿದ್ದಾನೆ. ಇವನು ಇತ್ತೀಚಿನ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ.. ಇರಾಕಿನಲ್ಲಿ ಅಲ್-ಖೈದಾ ಪರ ಕೆಲಸ ಮಾಡಿದ್ದ ಜುಲಾನಿ, ಐದು ವರ್ಷಗಳ ಕಾಲ ಅಮೆರಿಕದ ಕಾದಾಯ ಜೈಲಿನಲ್ಲಿ ದಿನಕಳೆಯುವಂತಾಗಿತ್ತು.

2012ರಲ್ಲಿ, ಸಿರಿಯಾದ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಅವರ ಆಡಳಿತವನ್ನು ತೆರವುಗೊಳಿಸುವ ಪ್ರಣಾಳಿಕೆಯನ್ನು ಅಲ್-ನುಸ್ರಾ ಫ್ರಂಟ್ ಕೈಗೊಂಡಿತ್ತು. ಅಲ್-ಖೈದಾ ಮುಖ್ಯಸ್ಥ ಅಯಮಾನ್ ಅಲ್-ಜವಾಹಿರಿಯೊಂದಿಗೆ ನಂಟು ಹೊಂದಿದ ಜುಲಾನಿ, ಈ ಸಂಘಟನೆಯನ್ನು ಬೆಳೆಯಲು ಮತ್ತು ಬಲಪಡಿಸಲು ಶ್ರಮಿಸಿದ್ದಾನೆ.

ಈ ಬೆಳವಣಿಗೆಗಳು ಸಿರಿಯಾದ ರಾಜಕೀಯ ಸ್ಥಿರತೆ ಮತ್ತು ಭದ್ರತೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದ್ದು, ಇಡೀ ಜಗತ್ತಿನ ಗಮನ ಈ ಪ್ರದೇಶದ ಕಡೆ ಸೆಳೆಯುತ್ತಿವೆ.

Tags: 2012Abu Mohammad al-Julani.Al-Nusra.DamascusHayat Tahrir al-Sham (HTS)President Bashar al-Assadrebel JulaniSyria
Previous Post

ಪರೀಕ್ಷಾರ್ಥಿಗಳಿಗೆ ಬಿಗ್ ಶಾಕ್:ಅರ್ಧ ತೋಳಿನವರೆಗೆ ಬಟ್ಟೆ ಕತ್ತರಿಸಿ ಒಳಗೆ ಬಿಟ್ಟ ಸಿಬ್ಬಂದಿ

Next Post

ಸೀನಿಯರ್ಸ್ ನೋಡಿ , ಜೂನಿಯರ್ ಕಂಟೆಸ್ಟೆಂಟ್ಗಳು ಫುಲ್ ಖುಷ್.!

Related Posts

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?
Top Story

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

by ಪ್ರತಿಧ್ವನಿ
May 27, 2026
0

ಬೆಂಗಳೂರು : ಕಾಂಗ್ರೆಸ್ ನಾಯಕತ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ನಡುವಿನ ದೀರ್ಘಕಾಲದ ಶೀತಲ ಸಮರ ಪರಿಹರಿಸುವಲ್ಲಿ ಯಶಸ್ವಿಯಾದಂತೆ ಕಂಡು ಬರುತ್ತಿದೆ. ಈ ಮೂಲಕ ಸಿದ್ದರಾಮಯ್ಯ ವಿದಾಯಕ್ಕೆ...

Read moreDetails
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರಿ ಗೊಂದಲ; “ಇದು ನನ್ನ ಉತ್ತರ ಪತ್ರಿಕೆಯೇ ಅಲ್ಲ” ಎಂದು ವಿದ್ಯಾರ್ಥಿಗಳ ಆಕ್ರೋಶ

ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರಿ ಗೊಂದಲ; “ಇದು ನನ್ನ ಉತ್ತರ ಪತ್ರಿಕೆಯೇ ಅಲ್ಲ” ಎಂದು ವಿದ್ಯಾರ್ಥಿಗಳ ಆಕ್ರೋಶ

May 26, 2026
ಅರಣ್ಯ ಒತ್ತುವರಿಗೆ ಖಡಕ್ ಎಚ್ಚರಿಕೆ; 2015 ಬಳಿಕದ ಅತಿಕ್ರಮಣ ತೆರವಿಗೆ ಖಂಡ್ರೆ ಆದೇಶ

ಅರಣ್ಯ ಒತ್ತುವರಿಗೆ ಖಡಕ್ ಎಚ್ಚರಿಕೆ; 2015 ಬಳಿಕದ ಅತಿಕ್ರಮಣ ತೆರವಿಗೆ ಖಂಡ್ರೆ ಆದೇಶ

May 26, 2026
Next Post
ಸೀನಿಯರ್ಸ್ ನೋಡಿ , ಜೂನಿಯರ್ ಕಂಟೆಸ್ಟೆಂಟ್ಗಳು ಫುಲ್ ಖುಷ್.!

ಸೀನಿಯರ್ಸ್ ನೋಡಿ , ಜೂನಿಯರ್ ಕಂಟೆಸ್ಟೆಂಟ್ಗಳು ಫುಲ್ ಖುಷ್.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada