
ಮುಂಬೈ ; ದಿವಂಗತ ರತನ್ ಟಾಟಾ ಅವರ ಕನಸಿನ ಕೂಸಾಗಿದ್ದ ಟಾಟಾ ನ್ಯಾನೋ ಕಾರನ್ನು ಮತ್ತೆ ಆಧುನಿಕ ವಿನ್ಯಾಸಗಳು ಹಾಗೂ ತಂತ್ರಜ್ಞಾನದೊಂದಿಗೆ ಮತ್ತೆ ಬಿಡುಗಡೆ ಮಾಡಲಾಗುತ್ತದೆ ಎಂಬ ಪೋಸ್ಟ್ ನ್ನು ಕೆಲವು ಕಿಡಿಗೇಡಿಗಳು ಫೇಸ್ ಬುಕ್ ನಲ್ಲಿ ವ್ಯಾಪಕವಾಗಿ ಶೇರ್ ಮಾಡುತಿದ್ದಾರೆ.

ಟಾಟಾ ಕಂಪೆನಿಯ ಸುಧಾರಿತ ಆವೃತ್ತಿಯ ಕಾರು 4.5 ಲಕ್ಷಕ್ಕೆ ಬಿಡುಗಡೆ ಮಾಡಲಾಗುತ್ತದೆ ಎಂಬ ಒಕ್ಕಣೆಯೊಂದಿಗೆ ಆಕರ್ಷಕವಾಗಿರುವ ಕಾರಿನ ಚಿತ್ರ ಹಾಕಿಕೊಳ್ಳುತಿದ್ದಾರೆ. ಇದಕ್ಕೆ ಸಾವಿರಾರು ಲೈಕುಗಳೂ ಬಂದಿವೆ. ಕೆಲ ಬುದ್ದಿವಂತರು ಟಾಟಾ ಕಂಪೆನಿಗೆ ಈ ವಿಷಯ ಗೊತ್ತೇ ಎಂದು ಕಮೆಂಟಿಸಿದ್ದಾರೆ.
ಆದರೆ ವಾಸ್ತವ ಏನು ಗೊತ್ತೇ ? ಟಾಟಾ ಕಂಪೆನಿ ಈವರೆಗೂ ಯಾವುದೇ ನೂತನ ಕಾರಿನ ವಿನ್ಯಾಸವನ್ನೂ ಸಿದ್ದಪಡಿಸಿಲ್ಲ , ಮತ್ತೆ ನ್ಯಾನೋ ಕಾರಿನ ಉತ್ಪಾದನೆ ಮಾಡಲು ಯೋಚಿಸಿಯೇ ಇಲ್ಲ . ಇದು ಫೇಸ್ ಬುಕ್ ನಲ್ಲಿ ಲೈಕುಗಳಿಗೋಸ್ಕರ ಕೆಲ ಕಿಡಿಗೇಡಿಗಳು ಟೊಯೋಟ ಕಂಪೆನಿ ಅಮೇರಿಕದಲ್ಲಿ ಬಿಡುಗಡೆ ಆಗಿರುವ ಕಾರಿನ ಚಿತ್ರವನ್ನು ಹಾಕಿ ಜನರನ್ನು ಮಂಗ ಮಾಡುತಿದ್ದಾರೆ.
ಒಂದು ವೇಳೆ ಟಾಟಾ ಕಾರು ಬಿಡುಗಡೆ ಮಾಡುವುದೇ ಆದಲ್ಲಿ ಮೊದಲಿಗೆ ಪತ್ರಿಕೆಗಳಲ್ಲಿ ಈ ವಿಷಯ ಪ್ರಕಟವಾಗಬೇಕಿತ್ತು. ಹೀಗಾಗಿ ಇದೆಲ್ಲವೂ ಸುಳ್ಳು ಮಾಹಿತಿ ಆಗಿದೆ. ಇನ್ನೂ ಕೆಲವು ದುಷ್ಕರ್ಮಿಗಳು ಪೇಸ್ ಬುಕ್ ನಲ್ಲಿ ಆಕರ್ಷಕ ಮಹಿಳೆಯ ಚಿತ್ರ ಹಾಕಿ ಈಕೆ 35 ವರ್ಷ ವಯಸ್ಸಿನ ವಿಧವೆ ಎಂಬ ಮಾಹಿತಿ ನೀಡಿ ಶ್ರೀಮಂತೆಯಾಗಿರುವ ಈಕೆಗೆ ಎರಡನೇ ಮದುವೆಗೆ ವರ ಬೇಕಿದೆ , ಅಲ್ಲದೆ ಇದೇ ರೀತಿ ಸುಂದರ ಯುವತಿಯ ಚಿತ್ರ ಹಾಕಿ ಈಕೆಗೆ ಗೆಳೆಯರು ಬೇಕಾಗಿದ್ದಾರೆ ನಮ್ಮ ಪೇಜನ್ನು ಲೈಕ್ ಮಾಡಿದರೆ ಫೋನ್ ನಂಬರ್ ನೀಡಲಾಗುವುದು ಎಂಬ ಅಮಿಷ ಒಡ್ಡುತಿದ್ದಾರೆ.
ಆದರೆ ವಾಸ್ತವವಾಗಿ ಈ ಮಹಿಳೆಯು ವಿಧವೆ ಅಲ್ಲ , ತಮ್ಮ ಪೇಜ್ ಲೈಕು , ಶೇರ್ ಪಡೆಯಲು ದುಷ್ಕರ್ಮಿಗಳು ಯಾರೋ ಹಾಕಿರುವ ಪ್ರೊಫೈಲ್ ಫೋಟೊ ತೆಗೆದುಕೊಂಡು ಸುಳ್ಳು ಮಾಹಿತಿ ನೀಡಿ ವಂಚಿಸುತಿದ್ದಾರೆ.ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿದೆ.ಸುಂದರ ಚಿತ್ರಕ್ಕೆ ಮಾರು ಹೋದರೆ ಹಣ ಸುಲಿಗೆ ಖಚಿತ.