ಡಿಸಿಎಂ ಡಿಕೆ ಶಿವಕುಮಾರ್ (Dcm dk Shivakumar) ಮೇಲಿಂದ ಮೇಲೆ ಅಚ್ಚರಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಇಂಗ್ಲಿಷ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಿಎಂ ಸೀಟ್ ಹಂಚಿಕೆ ಒಪ್ಪಂದವಾಗಿದೆ ಎಂದಿದ್ದ ಡಿಕೆ (DK) ಇದೀಗ ವರಸೆ ಬದಲಾಯಿಸಿದ್ದಾರೆ.
ಡಿಸಿಎಂ ಡಿಕೆ ಹೇಳಿಕೆ ಬೆನ್ನಲೇ ಈ ಕಾಂಗ್ರೆಸ್ ನಲ್ಲಿ ತೀವ್ರ ಚರ್ಚೆ ಶುರುವಾಗಿತ್ತು. ಹೀಗಾಗಿ ಡಿಕೆ ಯು ಟರ್ನ್ ಹೊಡೆದಂತೆ ಮಾತನಾಡಿದ್ದಾರೆ. ಸಿದ್ದರಾಮಯ್ಯ (Cm siddaramaiah) ಬೆನ್ನಿಗೆ ಸಾಯೋವರೆಗೂ ಬಂಡೆಯಾಗಿರುತ್ತೇನೆಂಬ ಎಂಬ ಹೇಳಿಕೆ ಕೊಟ್ಟಿದ್ದಾರೆ.
ಇದೀಗ ಮತ್ತೆ ಈ ಹೇಳಿಕೆಯ ಕುರಿತು ಕೈಪಡೆಯಲ್ಲಿ ಭಾರೀ ಚರ್ಚೆ ಶುರುವಾಗಿದೆ. ಕೆಲ ದಿನಗಳ ಹಿಂದಷ್ಟೇ ಡಿ.ಕೆ ಶಿವಕುಮಾರ್ ಅಧಿಕಾರ ಹಂಚಿಕೆ ಮಾತುಕತೆ ನಡೆದಿದೆ ಎಂದು. ಆದ್ರೆ ನಿನ್ನೆ ಹಾಸನ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಬೆನ್ನಿಗೆ ಬಂಡೆಯಾಗಿರುತ್ತೇನೆಂಬ ಹೇಳಿಕೆ ನೀಡಿದ್ದಾರೆ. ಇದ್ರಿಂದ ಡಿಕೆ ದಾಳವೇನು ಎಂಬುದೇ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿಯೇ ಡಿಸಿಎಂ ಹೇಳಿಕೆಗೆ ಅಪಸ್ವರಗಳು ಕೇಳಿ ಬಂದಿದ್ದರಿಂದ, ಸಂಪುಟದ ಸಚಿವರು ಬೇಸರ ವ್ಯಕ್ತಪಡಿಸಿದ್ದರಿಂದ ಡಿಕೆ ಶಿವಕುಮಾರ್ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ್ರ ಅಥವಾ ಇತರ ಹಿಂದೆ ಬೇರೆಯದ್ದೇ ರಾಜಕೀಯ ಲೆಕ್ಕಾಚಾರ ಇದೆಯಾ ಎಂಬ ಗೊಂದಲದಲ್ಲಿ ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರು, ಸಚಿವರು, ಶಾಸಕರುಗಳು ಇದ್ದಾರೆ ಎನ್ನಲಾಗಿದೆ.