ಇಂದು ಪುಷ್ಪ 2 ಸಿನಿಮಾ ದೇಶದಾದ್ಯಂತ ಬಿಡುಗಡೆಯಾಗಿ, ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಯ ಗಳಿಕೆ ಮಾಡಿರುವ ಸಂತಸದಲ್ಲಿರುವ ಚಿತ್ರತಂಡಕ್ಕೆ ಹೈದರಾಬಾದ್ ಪೊಲೀಸರು ಆಘಾತ ನೀಡಿದ್ದಾರೆ.
ಹೌದು, ಅಲ್ಲುಅರ್ಜುನ್ ಮೇಲೆ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪುಷ್ಪಾ 2 ಸಿನಿಮಾದ ಪ್ರೀಮಿಯರ್ ಶೋ ವೇಳೆ ಹೈದಾರಾಬಾದ್‌ನ ಚಿತ್ರಮಂದಿರದ ಬಳಿ ನಡೆದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ ಘಟನೆಯಲ್ಲಿ ಅಲ್ಲು ಅರ್ಜುನ್ ಗೆ ಸಂಕಷ್ಟ ಎದುರಾಗಿದೆ.

ಈ ಘಟನೆಗೆ ಪರೋಕ್ಷವಾಗಿ ನಟ ಅಲ್ಲು ಅರ್ಜುನ್ ಕಾರಣವಾಗಿದ್ದಾರೆ. ಏಕೆಂದರೆ ಯಾವುದೇ ಮುನ್ಸೂಚನೆ ನೀಡದೆ ಈ ಚಿತ್ರ ಮಂದಿರಕ್ಕೆ ಪ್ರೀಮಿಯರ್ ಶೋ ನೋಡಲು ಅಲ್ಲು ಅರ್ಜುನ್ ಆಗಮಿಸಿದ್ದಕ್ಕೆ ಈ ಘಟನೆ ಜರುಗಿದೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ನಟ ಅಲ್ಲು ಅರ್ಜುನ್ ಜೊತೆಗೆ ಘಟನೆ ನಡೆದ ಚಿತ್ರಮಂದಿರದ ಮ್ಯಾನೇಜ್ಮೆಂಟ್ ವಿರುದ್ಧ ಕೂಡ ಪ್ರಕರಣ ದಾಖಲಾಗಿದ್ದು, ಅಭಿಮಾನಿಗಳನ್ನು ನಿರ್ವಹಿಸಲು ಯಾವುದೇ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗದ ಕಾರಣ ದಂಡ ವಿಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.







