ಮಹಾರಾಷ್ಟ್ರದಲ್ಲಿ (Maharashtra) ಸರ್ಕಾರ ರಚನೆ ಮತ್ತು ಮುಖ್ಯಮಂತ್ರಿಯ (Cm) ಆಯ್ಕೆಯ ಕಗ್ಗಂಟಿಗೆ ಅಂತಿಮವಾಗಿ ಇಂದು ತೆರೆ ಬೀಳುವ ಸಾಧ್ಯತೆಯಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನ ಆಯ್ಕೆ ಇಂದು ಅಂತಿಮಗೊಳ್ಳಲಿದೆ. ಇಂದು ಸಿಎಂ ಅಭ್ಯರ್ಥಿ ಆಯ್ಕೆ ಯಾಗಿ ನಾಳೆ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.

ಮಹಾಯುತಿ (Mahayuti) ಮೈತ್ರಿ ಕೂಟದಿಂದ ಅಂತಿಮವಾಗಿ ದೇವೇಂದ್ರ ಫಡ್ನವೀಸ್ (Devendra Fadnavis) ಹೆಸರು ಅಂತಿಮಗೊಳ್ಳಬಹುದು ಎನ್ನಲಾಗಿದ್ದು, ಫಡ್ನವೀಸ್ ಮತ್ತೆ ಸಿಎಂ ಆಗುವ ಸಾಧ್ಯತೆ ನಿಚ್ಚಳವಾಗಿದೆ ಹಾಗೂ ಏಕನಾಥ ಶಿಂಧೆ (Eknath Shinde) ಡಿಸಿಎಂ ಆಗಲು ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇಂದಿನ ಈ ಪ್ರಕ್ರಿಯೆಗೆ,ಮಹಾ ನಾಯಕನ ಆಯ್ಕೆಗಾಗಿ ಈಗಾಗಲೇ ಕೇಂದ್ರ ವೀಕ್ಷಕರಾದ ನಿರ್ಮಲಾ ಸೀತಾರಾಮನ್ ಮತ್ತು ವಿಜಯ್ ರೂಪಾನಿ ಮುಂಬೈಗೆ ಬಂದಿದ್ದಾರೆ.ಬಿಜೆಪಿಯ ನೂತನ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದವರಿಗೆ ಮಹಾರಾಷ್ಟ್ರ ಸಿಎಂ ಜೊತೆಗೆ ಇಬ್ಬರು ಡಿಸಿಎಂಗಳ ನೇಮಕವಾಗಲಿದೆ.