ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ (Cabinet) ನಿಧಾನವಾಗಿ ತಲ್ಲಣ ಆರಂಭವಾಗಿದ್ದು, ಸಂಪುಟ ಪುನಾರಚನೆ ಕೆಲ ಸಚಿವರ ಟೆನ್ಶನ್ ಹೆಚ್ಚಿಸಿದೆ. ಹೀಗಾಗಿ ಎಲ್ಲಿ ನಮ್ಮ ಸ್ಥಾನಕ್ಕೆ ಕುತ್ತು ಬರಲಿದೆಯೋ ಎಂದು ಕೆಲ ಸಚಿವರು ಕಸಿವಿಸಿಗೊಂಡಿದ್ದರೆ, ಮತ್ತೊಂದೆಡೆ ಇನ್ನಾದ್ರೂ ಸಂಪುಟಕ್ಕೆ ಎಂಟ್ರಿ ಕೊಡಬೇಕು ಅಂತ ಇನ್ನುಳಿದ ಶಾಸಕರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಆದ್ರೆ ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಕೋಲಾರದ ಶಾಸಕ ಕೊತ್ತೂರು ಮಂಜುನಾಥ್ (Kotturu manjunath) ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ಸಚಿವನಾಗಲು ನಾನು ಯಾರ ಮನೆ ಬಾಗಿಲಿಗೂ ಹೋಗಲ್ಲ,ಸಚಿವ ಸ್ಥಾನ ಕೇಳಲ್ಲ. ನಮ್ಮ ಹೈಕಮಾಂಡ್ ತಾವಾಗಿಯೇ ಸಚಿವ ಸ್ಥಾನ ಕೊಟ್ಟರೆ ಸ್ವೀಕರಿಸುತ್ತೇನೆ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು ಸಚಿವ ಸ್ಥಾನದ ಬಗ್ಗೆ ತಾವು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸಚಿವ ಸಂಪುಟದಲ್ಲಿ ಯಾರಿಗೆ ಸ್ಥಾನಮಾನ ಬೇಕೋ ಅವರು ಬೇಕಾದ್ರೆ ಹೈಕಮಾಂಡ್ (Highcommand) ಬಳಿ ಹೋಗುತ್ತಾರೆ. ಸಚಿವ ಸ್ಥಾನ ಕೇಳುವುದು ಅವರವರ ಜವಾಬ್ದಾರಿ ಎಂದಿದ್ದಾರೆ.












