ಈಗಾಗಲೇ ರೈತರ ಜಮೀನು (Farmers land) ಹಾಗೂ ಧಾರ್ಮಿಕ ಸ್ಥಳಗಳಿಗೆ ವಕ್ಫ್ ಬೋರ್ಡ್ ನೋಟೀಸ್ (Waqf board notice) ನೀಡಿದ ಹಿನ್ನಲೆ, ದಾಖಲೆಗಳಲ್ಲಿ ಧಿಡೀರ್ ವಕ್ಫ್ ಹೆಸರು ಪ್ರತ್ಯಕ್ಷವಾದ ಕಾರಣ ರಾಜ್ಯದಲ್ಲಿ ವಕ್ಫ್ ಬೋರ್ಡ್ ವಿರುದ್ಧದ ಹೋರಾಟ ಜೋರಾಗಿದೆ. ಆದ್ರೆ ಇಂದು ಈ ಬಗ್ಗೆ ಮಾತನಾಡುವ ವೇಳೆ ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ (Chandrashekaranatha swamiji) ದೊಡ್ಡ ವಿವಾದ ಸೃಷ್ಟಿಸಿದ್ದಾರೆ.
ಚಂದ್ರಶೇಖರನಾಥ ಸ್ವಾಮೀಜಿ ವಕ್ಫ್ ಬೋರ್ಡ್ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸುವ ವೇಳೆ ಚಂದ್ರಶೇಖರನಾಥ ಸ್ವಾಮೀಜಿ, ಭಾರತದಲ್ಲಿ ಮುಸ್ಲಿಮರಿಗೆ (Muslim) ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಇಂದು ಮಾತನಾಡಿದ ಚಂದ್ರಶೇಖರನಾಥ ಸ್ವಾಮೀಜಿ, ನಮ್ಮ ದೇಶದಲ್ಲಿ ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದು ವಿವಾದ ಸೃಷ್ಟಿಸಿದ್ದಾರೆ. ನಾವೆಲ್ಲರೂ ಸೇರಿ ಭಾರತದಲ್ಲಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು. ಈಗಾಗಲೇ ಆತಂಕದಲ್ಲಿರುವ ರೈತರ ಪರವಾಗಿ ಹೋರಾಟ ಮಾಡೋಣ. ರಾಜ್ಯ ಸರ್ಕಾರ ಬಿದ್ದು ಹೋದರು ಪರವಾಗಿಲ್ಲ. ನಾವೆಲ್ಲರೂ ಈ ಬಗ್ಗೆ ಉಗ್ರ ಹೋರಾಡೋಣ ಎಂದು ಹೇಳಿದ್ದಾರೆ..