ಸಿಎಂ ಸಿದ್ದರಾಮಯ್ಯ (Cm siddaramaiah) ನೀಡಿರುವ ಹೊಡೆತಕ್ಕೆ ಬಿಜೆಪಿ (Bjp) ಹಾಗೂ ಜೆಡಿಎಸ್ (Jds) ನಾಯಕರು ಕಂಪ್ಲೀಟ್ ಶೇಕ್ ಆಗ್ತಿದ್ದಾರೆ ಅಂತ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

ಮೈಸೂರಿನ (Mysuru) ಮುಡಾ ಅಕ್ರಮ ಕೇಸ್ (Muda scam) ವಿಚಾರವಾಗಿ ಪ್ರತಿಪಕ್ಷಗಳ ಆರೋಪದ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ (Shivaraj tangadagi), ರಾಜಕೀಯ ಪ್ರೇರಿತ ಕೇಸ್ ಹಾಕಿದ್ದಕ್ಕೆ ರಾಜಕೀಯವಾಗಿ ಈಗಾಗಲೇ ಉತ್ತರ ಕೊಟ್ಟಿದ್ದೀವಿ. ಸಿಎಂ ವಿರುದ್ಧ ಕೇಸ್ ಹಾಕಿದ್ದಕ್ಕೆ ಜನ ರೊಚ್ಚಿಗೆದ್ದಿದ್ದಾರೆ ಎಂದು ಸ್ಪಷ್ಟವಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಮೊನ್ನೆ ಮೊನ್ನೆಯಷ್ಟೇ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ಈ ಮೂಲಕ ಬಿಜೆಪಿ ಜೆಡಿಎಸ್‌ಗೆ ರಾಜ್ಯದ ಜನರು ಯಾರ ಪರ ಇದ್ದಾರೆ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ. ಕಾಂಗ್ರೆಸ್‌ನವರು (Congress) ಬ್ರಿಟಿಷರನ್ನೇ ದೇಶ ಬಿಟ್ಟು ಓಡಿಸಿದ್ವಿ. ಇನ್ನು ಬಿಜೆಪಿಯವರು ಯಾವ ಲೆಕ್ಕ ಅಂತ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.





