ಬೆಂಗಳೂರಿನ (Bengaluru) ರಾಜರಾಜೇಶ್ವರಿ ನಗರ (Rajarajeshwari nagar) ಕ್ಷೇತ್ರದ BJP ಶಾಸಕ ಮುನಿರತ್ನ ವಿರುದ್ಧ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣ ಸಂಬಂಧ, ಅದು ಶಾಸಕರದ್ದೇ ಧ್ವನಿ ಹೌದಾ ಅಲ್ವಾ ಎಂದು ದೃಢೀಕರಿಸಲು ಆ ಆಡಿಯೋ ರೆಕಾರ್ಡ್ ಅನ್ನು FSLಗೆ ಕಳುಹಿಸಲಾಗಿತ್ತು.

ಇದೀಗ ಈ ಆಡಿಯೋ ಮಾದರಿಯ ವರದಿ ಲಭ್ಯವಾಗಿದ್ದು, ಈ ಆಡಿಯೋದಲ್ಲಿ ಕೇಳಿಬಂದಿರುವುದು ಬಿಜೆಪಿ ಶಾಸಕ ಮುನಿರತ್ನ (MLA muniratna) ಅವರದ್ದೇ ಧ್ವನಿ ಎನ್ನುವುದು ಲ್ಯಾಬ್ ರಿಪೋರ್ಟ್ ನಲ್ಲಿ ದೃಢವಾಗಿದೆ. ಹೀಗಾಗಿ ಮುನಿರತ್ನಗೆ ಆತಂಕ ಎದುರಾಗಿದೆ.
ಗುತ್ತಿಗೆದಾರರಿಗೆ ನಿಂದಿಸಿ, ಜಾತಿ ನಿಂದನೆ ಮಾಡಿದ್ದಾರೆ ಎಂಬ ಪ್ರಕರಣ ಇದೀಗ ದೃಢಪಡುವ ಲಕ್ಷಣಗಳು ಗೋಚರಿಸುತ್ತಿವೆ.ಈ ಹಿಂದೆ ಶಾಸಕರು ತಮ್ಮ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ BBMP ಗುತ್ತಿಗೆದಾರ ವೇಲು ನಾಯ್ಕರ್ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.





