ಬಿಗ್ ಬಾಸ್ ಕನ್ನಡ ಸೀಸನ್ 11 9ನೇ ವಾರಕ್ಕೆ ಕಾಲಿಟ್ಟಿದ್ದು ಸದ್ಯ ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಸಾಮ್ರಾಜ್ಯ ಟಾಸ್ಕ್ ಜೋರಾಗಿ ನಡಿತಾ ಇದೆ. ಮಹಾರಾಜ ಮಂಜು ಅವರ ಆಜ್ಞೆಯನ್ನು ಉಳಿದೆಲ್ಲ ಪ್ರಜೆಗಳು ಪಾಲಿಸಲೇಬೇಕು ಇಲ್ಲವಾದಲ್ಲಿ ಶಿಕ್ಷೆ ಅಂತೂ ಖಂಡಿತ.
ಅದರಲ್ಲು ಮಹಾರಾಜರ ಮುಂದೆ ಕೈಕಟ್ಟಿ ತಲೆತಗ್ಗಿಸಿಯೇ ಮಾತನಾಡಬೇಕು, ಎದುರು ಮಾತನಾಡುವಂತಿಲ್ಲ ಮಹಾರಾಜರ ಕಣ್ಣನ್ನು ನೋಡಿ ಮಾತನಾಡುವಂತಿಲ್ಲ ಹಾಗೂ ಅವರು ಓಡಾಡುವಾಗ ಯಾರು ಕೂಡ ಅಡ್ಡ ಬರಬಾರದು. ಇಂಥವು ಒಂದಿಷ್ಟು ರೂಲ್ಸ್ ಗಳನ್ನ ಮಂಜು ಅವರು ಹಾಕಿದ್ದಾರೆ.
ಇನ್ನು ಮಂಜು ಅವರ ಪರ್ಸನಲ್ ಅಸಿಸ್ಟೆಂಟ್ ಅಂದ್ರೆ ,ಮಂಜುಗೆ ಮನೆಯಲ್ಲಿ ಏನಾಗುತ್ತಿದೆ ಎಂಬ ವಿಚಾರವನ್ನು ತಿಳಿಸುವುದು ಹಾಗೂ ಮಹಾರಾಜನೇ ತಪ್ಪು ಮಾಡದೆ ಇರುವಂತೆ ನೋಡಿಕೊಳ್ಳುವುದು ಗೋಲ್ಡ್ ಸುರೇಶ್ ಕೆಲಸವಾಗಿದೆ. ತ್ರಿವಿಕ್ರಮ್ ಹಾಗೂ ರಜತ್ ಅವರು ಮನೆಯಲ್ಲಿ ಮಂಜು ಅವರು ಹೇಳಿದ ರೂಲ್ಸ್ ಪ್ರಜೆಗಳು ಫಾಲ್ಲೋ ಮಾಡುವಂತೆ ನೋಡಿಕೊಳ್ಳಬೇಕು ಜೊತೆಗೆ ತಪ್ಪು ಮಾಡಿದವರಿಗೆ ಅಲ್ಲಿಯೇ ಶಿಕ್ಷೆಯನ್ನು ನೀಡುವುದು ಇವರಿಬ್ಬರ ಕೆಲಸವಾಗಿರುತ್ತದೇ.
ಇಂದು ಬಿಗ್ ಬಾಸ್ ನ ಪ್ರೊಮೋ ಅವರ ಬಿದ್ದಿದ್ದು ನಾಮಿನೇಷನ್ ಪ್ರಕ್ರಿಯೆ ಜೋರಾಗಿಯೇ ನಡಿತಾ ಇದೆ. ಎಲ್ಲಾ ಕಂಟೆಸ್ಟಂಟ್‌ಗಳ ಭಾವಚಿತ್ರವನ್ನು ಇಟ್ಟಿರುತ್ತಾರೆ ಒಬ್ಬೊಬ್ಬರಾಗಿಯೇ ಬಂದು ಬಾಣಕ್ಕೆ ಅವರು ನಾಮಿನೇಟ್ ಮಾಡಬೇಕು ಎಂದುಕೊಂಡಿರುವ ವ್ಯಕ್ತಿಯ ಚಿತ್ರವನ್ನ ಚುಚ್ಚಿ , ಮುಖ್ಯದ್ವಾರದಿಂದ ಹೊರಗೆ ಹೋಗುವಂತೆ ಬಾಣವನ್ನ ಬಿಡಬೇಕು ಹಾಗೂ ಕಾರಣವನ್ನು ನೀಡಬೇಕು.
ಪ್ರತಿಯೊಬ್ಬರು ಕೂಡ ಒಬ್ಬೊಬ್ಬರ ಹೆಸರನ್ನ ಆಯ್ಕೆ ಮಾಡ್ತಾರೆ ,ಹಾಗೂ ಮೋಕ್ಷಿತ ಅವರು ತ್ರಿ ವಿಕ್ರಮ್ ಅವರ ಹೆಸರನ್ನು ಆಯ್ಕೆ ಮಾಡಿ ಮಂಜಣ್ಣನ ಜೊತೆ ಚೆನ್ನಾಗಿಯೇ ಇರ್ತಾರೆ, ಆದ್ರೆ ಮಂಜಣ್ಣ ಅಷ್ಟೇ ಬಿಲ್ಡಪ್ ಮನೆಯೊಳಗಡೆ ಅಷ್ಟೇ, ಆದ್ರೆ ಹೊರಗಡೆ ಇವರೇನು ಇಲ್ಲ ಎಂಬಂತೆ ತ್ರಿ ವಿಕ್ರಂ ಮಾತನಾಡ್ತಾರೆ, ಇದು ಸರಿಯಲ್ಲ ಇಂದು ಮೋಕ್ಷಿತ ನಾಮಿನೇಟ್ ಮಾಡ್ತಾರೆ.
ನನ್ನನ್ನು ಮ್ಯಾನುಪಿ ಲೇಟ್ ಮಾಡ್ತೀನಿ ಅಂತ ಹೇಳ್ತಾರೆ ಆದರೆ ನಿಜವಾಗ್ಲೂ ಮ್ಯಾನ್ಯುಲೆಟ್ ಮಾಡುವುದು ಮೋಕ್ಷಿತ, ಗೌತಮಿಯ ಜೊತೆ ಚೆನ್ನಾಗಿ ಇದ್ದು ಗೌತಮಿ ಸುಮ್ನೆ ಪೋಸಿಟಿವ್ ಅಂತ ಓಡಾಡ್ತಾರೆಆದ್ರೆ ಏನೂ ಇಲ್ಲ ಎಂಬಂತೆ ಮಾತನಾಡುತ್ತಾರೆ ,ಇವರು ನನಗೆ ಗೋಮುಖ ವ್ಯಾಗ್ರ ಅಂತ ಹೇಳ್ತಾರೆ. ಆದರೆ ನಿಜವಾಗಿ ಎರಡು ತಲೆಯ ಹಾವು ಮೋಕ್ಷಿತಾ ಎಂದು ತ್ರಿವಿಕ್ರಮ್ ಹೇಳುತ್ತಾರೆ.
ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ಕೂಡ ಅವರದ್ದೇ ಆಟವನ್ನ ಆಡುತ್ತಿದ್ದು, ಇಂದಿನ ಎಪಿಸೋಡ್ ನಲ್ಲಿ ಯಾರು ನಾಮಿನೇಟ್ ಆಗುತ್ತಾರೆ. ಈ ವಾರ ಯಾರು ಹೊರಬರಬಹುದು ಎಂಬುದನ್ನು ಕಾದು ನೋಡಬೇಕು.