
ಹಾವೇರಿಯ ಶಿಗ್ಗಾಂವ್ ಕ್ಷೇತ್ರದಲ್ಲಿ ಭರ್ಜರಿ ಜಯ ದಾಖಲಿಸಿದ ಬಳಿಕ ಶಾಸಕ ಪಠಾಣ್ ಯಾಸಿರ್ ಅಹ್ಮದ್ ಖಾನ್, ಇಂದು ಮುಸ್ಲಿಂ ನಿಯೋಗದ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.
ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿಯಾಗಿ ಗೆಲುವಿಗೆ ಸಹಕರಿಸಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ ಪಠಾಣ್ ಯಾಸಿರ್ ಅಹ್ಮದ್ ಖಾನ್. ಉತ್ತಮ ಕೆಲಸ ಮಾಡುವಂತೆ ನೂತನ ಶಾಸಕ ಪಠಾಣ್ಗೆ ಶುಭ ಹಾರೈಸಿದ್ದಾರೆ ಉಭಯ ನಾಯಕರು.

ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಕ್ಷೇತ್ರದ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಹರಿಸಿ ಎಂದು ಸೂಚನೆ ನೀಡಿದ್ದು, ಸಚಿವ ಜಮೀರ್ ಅಹಮದ್ ಖಾನ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕರಾದ ಶಿವಣ್ಣ, ನರೇಂದ್ರಸ್ವಾಮಿ, ಶ್ರೀನಿವಾಸ್ ಮಾನೆ, ಅಜ್ಜಂಪೀರ್ ಖಾದ್ರಿ ಉಪಸ್ಥಿತರಿದ್ರು.












