ಇಂದಿನಿಂದ ಪಾರ್ಲಿಮೆಂಟ್‌ನಲ್ಲಿ (Parliment) ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಆಡಳಿತ ಪಕ್ಷ ಮತ್ತು ವಿಪಕ್ಷಗಳ ಮಧ್ಯೆ ಹಲವಾರು ಪ್ರಮುಖ ವಿಚಾರಗಳು ಈ ಬಾರಿ ಚರ್ಚೆಗೆ ಬರುವ ನಿರೀಕ್ಷೆಯಿದೆ.
ಮತ್ತೊಂದೆಡೆ ಇದೇ ಅಧಿವೇಶನದಲ್ಲಿ ಮಹತ್ವದ ಬಿಲ್‌ಗಳನ್ನ ಮಂಡಿಸಲು ಪ್ರಧಾನಿ ಮೋದಿ (Pm modi) ನೇತೃತ್ವದ ಎನ್‌ಡಿಎ ಸರ್ಕಾರ (NDA) ಕೂಡ ಸಜ್ಜಾಗಿದೆ. ಈ ಬಾರಿಯ ಅಧಿವೇಶನದಲ್ಲಿ ಸುಮಾರು 15 ಮಸೂದೆಗಳನ್ನ ಮಂಡಿಸಲು ಕೇಂದ್ರ ಸರ್ಕಾರದ ನಿರ್ಧಾರ ಮಾಡಿದೆ ಎನ್ನಲಾಗಿದೆ.

ಈ ಮಸೂದೆಗಳ ಪೈಕಿ ಬಹುಮುಖ್ಯವಾಗಿ ವಕ್ಫ್ ಕಾಯಿದೆ ತಿದ್ದುಪಡಿ ಮಸೂದೆ (Waqf board amendment act) ಮಂಡನೆಗೂ ಕೇಂದ್ರ ಸರ್ಕಾರ ಸಜ್ಜಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ. ಈ ಮೂಲಕ ವಕ್ಫ್ ಬೋರ್ಡ್‌ಗೆ ಇರುವ ಅಧಿಕಾರಗಳನ್ನು ಮೊಟಕುಗೊಳಿಸಲು ಮೋದಿ ಸರ್ಕಾರ ಮುಂದಾಗಿದೆ.
ಇದರ ಜೊತೆಗೆ ಕೋಸ್ಟಲ್ ಶಿಪ್ಪಿಂಗ್ ಬಿಲ್ (Costal shipping bill), ಇಂಡಿಯನ್ ಪೋರ್ಟ್ಸ್ ಬಿಲ್ (Indian ports bill), ಭಾರತೀಯ ವಾಯುಯಾನ ವಿಧೇಯಕ, ದಿ ಮರ್ಚೆಂಟ್ ಶಿಪ್ಪಿಂಗ್ ಮಸೂದೆ, ದೇಶದಲ್ಲಿ ಹೊಸ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆ ಮಸೂದೆ ಮಂಡನೆಗೆ ಕೇಂದ್ರ ಸರ್ಕಾರ ಸಜ್ಜಾಗಿದೆ. ಆದ್ರೆ, ಒನ್ ನೇಷನ್, ಒನ್ ಎಲೆಕ್ಷನ್ ಮಸೂದೆ ಈ ಪಟ್ಟಿಯಲ್ಲಿ ಸೇರ್ಪಡೆ ಆಗಿಲ್ಲ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ.












