• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ರವೀರ್ ಶೆಟ್ಟಿ ಸಿನಿಮಾಗೆ ‘ಬಘೀರ’ ಬಲ…ನಿದ್ರಾದೇವಿ Next door ಟೀಸರ್ ರಿಲೀಸ್

ಪ್ರತಿಧ್ವನಿ by ಪ್ರತಿಧ್ವನಿ
November 22, 2024
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಸಿನಿಮಾ
0
Share on WhatsAppShare on FacebookShare on Telegram

ಟೀಸರ್ ನಲ್ಲಿ ‘ನಿದ್ರಾದೇವಿ Next door’… ಪ್ರವೀರ್ ಶೆಟ್ಟಿ ಸಿನಿಮಾಗೆ ಶ್ರೀಮುರಳಿ (Shree Murali ಸಾಥ್, ಬಘೀರನಿಂದ(Baheera) ಬಿಡುಗಡೆಯಾಯ್ತು ‘ನಿದ್ರಾದೇವಿ Next door’ ಸಿನಿಮಾ ಟೀಸರ್…

ADVERTISEMENT

ಕನ್ನಡ ಚಿತ್ರರಂಗದಲ್ಲೀಗ ಹೊಸ ಪ್ರಯತ್ನಗಳಗಳ ಪರ್ವ ಕಾಲ ಶುರುವಾಗಿದೆ. ಹೊಸಬರು ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಸಿನಿಮಾವೇ ‘ನಿದ್ರಾದೇವಿ Next door’. ಈ ಚಿತ್ರ ಸುರಾಮ್ ಮೂವೀಸ್ ನಲ್ಲಿ (Suram Movies) ತಯಾರಾಗಿದು, ಚಿತ್ರದ ಟೀಸರ್ ಸುರಾಮ್ ಮೂವೀಸ್ ಯುಟ್ಯೂಬ್ ನಲ್ಲಿ ಅನಾವರಣಗೊಂಡಿದೆ. ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಬಘೀರ ಸಿನಿಮಾ ಗೆಲುವಿನ ಖುಷಿಯಲ್ಲಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ (Roaring Star Shree Murali) ‘ನಿದ್ರಾದೇವಿ Next door’ (Nidradevi Next Door teaser) ಟೀಸರ್ ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭಾಷಯ ತಿಳಿಸಿದ್ದಾರೆ.

ಶ್ರೀಮುರಳಿ ಮಾತನಾಡಿ, ನಿರ್ಮಾಪಕರಾದ ಜಯರಾಮ್ ದೇವಸಮುದ್ರ ತುಂಬಾ ಕಾಳಜಿ, ಪ್ರೀತಿಯಿಂದ ಸಿನಿಮಾ ಮಾಡಿದ್ದಾರೆ ಅನ್ನುವುದು ಗೊತ್ತಾಗುತ್ತದೆ. ಅವರಿಗೆ ಒಳ್ಳೆಯದು ಆಗಲಿ. ನಿಮ್ಮಂತಹ ನಿರ್ಮಾಪಕರು ಇರುವವರೆಗೂ ನಮ್ಮಂತಹ ಕಲಾವಿದರಿಗೆ, ಚಿತ್ರರಂಗ ಎದುರಿಕೊಳ್ಳುವ ಅವಕಾಶವಿಲ್ಲ. ಪ್ರಯತ್ನಪಡಬೇಕು. ಪ್ರಯತ್ನಪಡುವುದರಲ್ಲಿ ತಪ್ಪಿಲ್ಲ. ನಿಮ್ಮ ದಯೆಯಿಂದ ಕಲಾವಿದರೆ, ನಿರ್ದೇಶಕರಿಗೆ ಚಿತ್ರತಂಡಕ್ಕೆ ಒಳ್ಳೆಯದಾಗುತ್ತದೆ. ನಾನು ಪ್ರವೀರ್ ಜಿಮ್ ಮೇಟ್ಸ್. ವರ್ಕೌಟ್ ಮಾಡುವಾಗ ಪ್ರವೀರ್ ಅದು ಮಾಡಿ ಇದು ಮಾಡಿ ಎನ್ನುತ್ತಾರೆ. ಅವರಿಗೆ ಒಳ್ಳೆಯದು ಆಗುತ್ತದೆ. ನಿಮ್ಮ ಕಣ್ಣಲ್ಲಿ ನಟನೆ ನೋಡಿದೆ. ಶೈನ್ ಫ್ಯಾನ್ ನಾನು. ನೀವು ಚಿತ್ರದಲ್ಲಿ ಚೆನ್ನಾಗಿ ಕಾಣ್ತಿದ್ದೀರಾ. ರಿಷಿಕಾಗೂ ಒಳ್ಳೆಯದು ಆಗಲಿ. ಹಣ ಖರ್ಚು ಮಾಡು ಅಲ್ಲ. ಸಿನಿಮಾ ಸುಮ್ಮನೇ ಮಾಡುವುದು ಅಲ್ಲ. ಇದನ್ನು ಕ್ಯಾಪ್ಟನ್ ಆಗಿ ಸುರಾಗ್ ಏನೋ ವಿಷ್ಯ ಹೇಳುತ್ತಿರುವುದು ಗೊತ್ತಾಗುತ್ತಿದೆ. ಮ್ಯೂಸಿಕ್ ಕೂಡ ಟೀಸರ್ ನಲ್ಲಿ ಚೆನ್ನಾಗಿದೆ ಎಂದರು.

ನಟ ಪ್ರವೀರ್ ಶೆಟ್ಟಿ (Praveen Shetty) ಮಾತನಾಡಿ, ಸುರಾಗ್ ನನಗೂ ಎರಡು ವರ್ಷದ ಜರ್ನಿ ಇದೆ. ನಮ್ಮ ಸ್ಟೋರಿ ಇಟ್ಕೊಂಡು ಹಲವಾರು ನಿರ್ಮಾಪಕರ ಬಳಿ ಹೋದೆವು. ಆದ್ರೆ ಜಯರಾಮ್ ಸರ್ ರಿಸೀವ್ ಮಾಡಿದಷ್ಟು ಬೇರೆ ಯಾರು ರಿಸೀವ್ ಮಾಡಲಿಲ್ಲ. ಥ್ಯಾಂಕೂ ಸರ್. ಇದು ನಿಮ್ಮಿಂದ ಆಗಿರೋದು. ಬ್ಯೂಟಿಫುಲ್ ವಿಷ್ಯುವಲ್ಸ್ (Shooted Beautifull Visuals) ಶೂಟ್ ಮಾಡಿದ್ದಾರೆ ನಮ್ಮ ಛಾಯಾಗ್ರಹಕರು, ಮ್ಯೂಸಿಕ್ ಕೂಡ ತುಂಬಾ ಚೆನ್ನಾಗಿದೆ. ರಿಷಿಕಾ (Rishika) ಅವರಿಂದ ತುಂಬಾ ಕಲಿಯುತ್ತಿದ್ದೇವೆ. ನಮ್ಮ ತಂಡಕ್ಕೆ ನಿಮ್ಮ ಬೆಂಬಲ ಇರಲಿ ಎಂದು ಹೇಳಿದರು.

ನಿರ್ದೇಶಕ ಸುರಾಗ್ ಮಾತನಾಡಿ, ಪ್ರವೀರ್ ನಾನು ಒಟ್ಟಿಗೆ ಸೇರಿದಾಗ ನಮ್ಮಿಬ್ಬರಿಗೆ ಒಂದೇ ತರ ಸಿನಿಮಾ ಮಾಡಬೇಕೆಂಬ ವಿಷನ್ ಇತ್ತು. ಅದು ನಮ್ಮಿಬ್ಬರಿಗೂ ಮ್ಯಾಚ್ ಆಯಿತು. ನಾನು ಏನು ಕಥೆ ,ಮಾಡಿಕೊಂಡಿದ್ದೇನೋ ಅದನ್ನು ಪ್ರವೀರ್ ಗೆ ಹೇಳಿದಾಗ ಅವರು ಖುಷಿಪಟ್ಟರು. ನಮ್ಮ ಟೆಕ್ನಿಕಲ್ ಟೀಂ (Technical Team) ಈ ಚಿತ್ರಕ್ಕೆ ಸಾಕಷ್ಟು ಶ್ರಮಿಸಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ. ನಿರ್ಮಾಪಕ ಜಯರಾಮ್ ಸರ್ ಒಳಗಡೆ ಒಬ್ಬ ನಿರ್ದೇಶಕರಾಗಿದ್ದಾರೆ. ಅವರಿಗೆ ಸಿನಿಮಾ ಟೆಸ್ಟ್ ತುಂಬಾ ಚೆನ್ನಾಗಿದೆ ಎಂದರು.

‘ನಿದ್ರಾದೇವಿ Next door’ ಟೀಸರ್ ಬಹಳ ಕುತೂಹಲ ಹೆಚ್ಚಿಸಿದೆ. ಟೀಸರ್ ನಲ್ಲಿ ಕಥೆ ಗಟ್ಟುರಟ್ಟು ಮಾಡದೇ ಟೀಸರ್ ಕಟ್ ಮಾಡಲಾಗಿದೆ. ಚೆಂದದ ಲವ್ ಸ್ಟೋರಿ(Love Story), ನಿದ್ರೆ ಇಲ್ಲದ ವ್ಯಕ್ತಿಯ ಸುತ್ತ ಸಾಗುವ ಕಥಾಹಂದರ ಸಿನಿಮಾದಲ್ಲಿದೆ. ಪ್ರವೀರ್ ಶೆಟ್ಟಿ, ರಿಷಿಕಾ ನಾಯಕ್ ಜೋಡಿಯಾಗಿ ಕಾಣಿಸಿಕೊಂಡಿದ್ದು, ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗು ಶ್ರುತಿ ಹರಿಹರನ್ (Shruthi Hariharan) , ಹಿರಿಯ ನಟ ಕೆ.ಎಸ್.ಶ್ರೀಧರ್, ಸುಧಾರಾಣಿ (Sudharani) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀವತ್ಸ, (Shree Vatsa) ಅನೂಪ್(Anoop), ಐಶ್ವರ್ಯ ಗೌಡ (Aishwarya Gowda) , ಮಾಸ್ಟರ್ ಸುಜಯ್ ರಾಮ್, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ.

ಈ ಚಿತ್ರಕ್ಕೆ ನಿರ್ಮಾಪಕರಾದ ಜಯರಾಮ್ ದೇವಸಮುದ್ರ ರವರು ತಮ್ಮ ಸುರಮ್ ಮೂವೀಸ್ ಬ್ಯಾನರ್ನಡಿಯಲ್ಲಿ ನಿರ್ಮಿಸಿದು, ಈ ಹಿಂದೆ ಇದೇ ಸಂಸ್ಥೆಯಲ್ಲಿ “ರೇವ್ ಪಾರ್ಟಿ ” ಮತ್ತು ” “ಎಂಗೇಜ್ಮೆಂಟ್ ” ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ನಿದ್ರಾದೇವಿ Next Door ಚಿತ್ರವೂ, ಅವರ ಬ್ಯಾನರ್ನಲ್ಲಿ ಬರುತಿರುವ ಒಂದು ವಿಭಿನ್ನ ಚಿತ್ರ. ಈ ಸಿನಿಮಾಗೆ ನಕುಲ್ ಅಭ್ಯಂಕರ್ ಅವರ ಸಂಗೀತ, ಅಜಯ್ ಕುಲಕರ್ಣಿ ಅವರ ಛಾಯಾಗ್ರಹಣ, ಊಲಾಸ್ ಹೈದೂರ್ ಅವರ ಪ್ರೊಡಕ್ಷನ್ ಡಿಸೈನ್, ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ (ಯುವ ಸಿನಿಮಾ ಖ್ಯಾತಿ) ಮತ್ತು ಹೇಮಂತ್ ಕುಮಾರ್ ಡಿ ಅವರ ಸಂಕಲನವಿದೆ.

Tags: AnoopAnurag PatilBageeraKannada movieNidradevi Next DoorPraveen Shettysandalwoodshine shettyShree VatsaShreevatsaSudarani
Previous Post

ನಾಳೆ ಮತ ಎಣಿಕೆಗೆ ಸಿದ್ಧತೆ ಹೇಗಿದೆ..? ಸಿಎಂ ಡಿಸಿಎಂ ಏನಂದ್ರು..?

Next Post

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಿಡುಗಡೆಗೊಂಡ ಮೊದಲ ಹಾಡು..

Related Posts

ಒಳದನಿಗೆ ಜೀವತುಂಬಿದ ʼ ಪ್ರತಿಧ್ವನಿ ʼ ಯೊಡನೆ- ನಾ ದಿವಾಕರ  ಲೇಖನ
ಅಂಕಣ

ಒಳದನಿಗೆ ಜೀವತುಂಬಿದ ʼ ಪ್ರತಿಧ್ವನಿ ʼ ಯೊಡನೆ- ನಾ ದಿವಾಕರ  ಲೇಖನ

by ಪ್ರತಿಧ್ವನಿ
April 13, 2026
0

-ನಾ ದಿವಾಕರ ವಿಕಸಿತ ಆಗಲು ಮುಂದಡಿಯಿಡುತ್ತಿರುವ ನವ ಭಾರತದಲ್ಲಿ ಡಿಜಿಟಲ್‌ ಯುಗ ಸೃಷ್ಟಿಸಿರುವ ತಲ್ಲಣಗಳು ಜನಸಂಖ್ಯೆಯ ಯಾವ ವಲಯವನ್ನೂ ಬಿಡದೆ ಪ್ರಭಾವಿಸಿವೆ ಪ್ರಭುತ್ವದ ಆಡಳಿತ ನೀತಿಗಳು ಮತ್ತು...

Read moreDetails
ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

April 13, 2026
ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

April 13, 2026
ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

April 13, 2026
ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

April 13, 2026
Next Post

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಿಡುಗಡೆಗೊಂಡ ಮೊದಲ ಹಾಡು..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada