ರಾಜ್ಯದಲ್ಲಿ ವಕ್ಫ್ ಬೋರ್ಡ್ ರೈತರು ಹಾಗೂ ಧಾರ್ಮಿಕ ಸ್ಥಳಗಳ ಮಾಲೀಕತ್ವ ಪ್ರಶ್ನಿಸಿ ನೀಡಿರುವ ನೋಟಿಸ್ ಅನ್ನು ಕೇವಲ ವಾಪಸ್ ತೆಗೆದುಕೊಂಡರೆ ಸಾಲುವುದಿಲ್ಲ ಅದನ್ನು ಪೂರ್ಣ ರದ್ದುಗೊಳಿಸಬೇಕು ಎಂದು ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಒಂದು ವೇಳೆ ರದ್ದುಗೊಳಿಸದಿದ್ದರೆ,ಚಳಿಗಾಲದ ಅಧಿವೇಶನ ವೇಳೆ ಈ ಬಗ್ಗೆ ಹೋರಾಟ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಅವರು, ವಕ್ಫ್ ಬೋರ್ಡ್ ಸರ್ವಾಧಿಕಾರವನ್ನು ವಾಪಸ್ ಪಡೆಯಬೇಕು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈಗಾಗಲೇ ಮನವಿ ಮಾಡಿದ್ದೇವೆ. ಮುಸ್ಲಿಮರಿಗಾಗಿ ವಕ್ಫ್ ಟ್ರಿಬ್ಯುನಲ್ ಒಪ್ಪುಲು ಸಾಧ್ಯವಿಲ್ಲ.ಭಾರತದಲ್ಲಿ ಇರಬೇಕಾದರೆ ಈ ನೆಲದ ಕಾನೂನು ಎಲ್ಲರಿಗೂ ಒಂದೇ ರೀತಿ ಅನ್ವಯವಾಗಬೇಕು ಎಂದಿದ್ದಾರೆ.