ದಿನಾಂಕ 9-10ನೇ ನವೆಂಬರ್ 2024 ಥೈಲ್ಯಾಂಡ್ ನಲ್ಲಿ UWSFF(united world sports and fitness federation) ಇವರ ಅಡಿಯಲ್ಲಿ ನಡೆದ ಅಂತರಾಷ್ಟ್ರೀಯ ದೇಹದಾಡ್ಯ ಸ್ಪರ್ಧೆಯಲ್ಲಿ ಕೋಲೂರುನ ಕುಂದಾಳಪುರದ ಪ್ರಸಾದ್ KJ ಅವರು ದೊಡ್ಡಬಸ್ತಿ ರಸ್ತೆಯ ಭುವನೇಶ್ವರಿನಗರದ Muscle Factory gym ದೇಹದಾಡ್ಯ ಕೋಚ್ Mr.ಶಿವು ಮತ್ತು ಬೆಂಗಳೂರಿನ ಜ್ಞಾನಭಾರತಿಯ ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಯೋಗ ಸಂಸ್ಥೆಯ ಯೋಗ ಗುರು Dr. ಸ್ವಪ್ನ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಭಾರತವನ್ನು ಪ್ರತಿನಿಧಿಸಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಪೈಕಿ
1. 85kg ಮೇಲ್ಪಟ್ಟ ವಿಭಾಗದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ (ದ್ವಿತೀಯ ಸ್ಥಾನ)
2. ಪವರ್ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ (ಪ್ರಥಮ ಸ್ಥಾನ)
3. ಅಷ್ಟೇ ಅಲ್ಲದೆ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ(ತೃತೀಯ ಸ್ಥಾನ) ಪಡೆದುಕೊಂಡಿದ್ದಾರೆ.
ಇನ್ನು, ತಮಿಳು ನಾಡುನಲ್ಲಿ ನಡೆದ 18ನೇ ಯೋಗ ಚಾಂಪಿಯನ್ ಶಿಪ್ – ದಕ್ಷಿಣ ಭಾರತ 2024 ವಿಭಾಗದಲ್ಲಿ
1.Front pose category ಯಲ್ಲಿ ಚಿನ್ನದ ಪದಕ (ಪ್ರಥಮ ಸ್ಥಾನ)
2. Standing pose category
ಯಲ್ಲಿ ಚಿನ್ನದ ಪದಕ (ಪ್ರಥಮ ಸ್ಥಾನ)
3. Common pose category ಯಲ್ಲಿ ಬೆಳ್ಳಿ ಪದಕ (ದ್ವಿತೀಯಾ ಸ್ಥಾನ) ದಕ್ಕಿಸಿಕೊಂಡಿದ್ದಾರೆ.
ಇಷ್ಟೆಲ್ಲದರ ಜೊತೆಗೆ ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್ ಶಿಪ್ 2024 ರಲ್ಲಿ 3ನೇ ಸ್ಥಾನ ಗಿಟ್ಟಿಸಿದ್ದಾರೆ.
ಹೀಗೆ ಹಲವು ಸ್ಪರ್ಧೆಗಳಲ್ಲಿ ಗೆಲ್ಲುವುದರ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ ಮತ್ತು ತಾವು ಪ್ರಾರಂಭ ಮಾಡಿದ ಅಲ್ಪ ಸಮಯದಲ್ಲೇ ಆರ್ ಆರ್ ನಗರದ Muscle mechanic Gym ನಲ್ಲಿ ಅಭ್ಯಾಸ ಮಾಡಿ ಯೋಗ ಮತ್ತು ದೇಹದಾಡ್ಯ ಎರಡರಲ್ಲು ಒಬ್ಬರೇ ಈ ಸಾಧನೆಯನ್ನು ಮಾಡಿದ ಮೊದಲಿಗ ಆಗಿ ಹೊರಹೊಮ್ಮಿದಾರೇ.