
ಮುಡಾ 50:50 ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ನವೆಂಬರ್ 25ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈವರೆಗೆ ನಡೆಸಿರುವ ತನಿಖೆಯ ಸಂಪೂರ್ಣ ವರದಿಯನ್ನು ಕೋರ್ಟ್‌ಗೆ ಸಲ್ಲಿಸಲಾಗುತ್ತದೆ. ಡಿಸೆಂಬರ್ 24ರ ಒಳಗಾಗಿ ಸಂಪೂರ್ಣ ವರದಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಈವರೆಗೆ ಒಂದೇ ಒಂದು ಪತ್ರವನ್ನು ಹಿರಿಯ ಅಧಿಕಾರಿಗಳಿಗೆ ಮಂಡಿಸಿಲ್ಲ. ಕೇಸ್ ಕುರಿತಂತೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಅವರಿಂದ ಮಾಹಿತಿ ಹಾಗೂ ಮಾರ್ಗದರ್ಶನ ಪಡೆದುಕೊಂಡು ವಿಚಾರಣೆ ಮಾಡ್ತಿದ್ದೇವೆ. ಎಲ್ಲಾ ಆರೋಪಿಗಳ ವಿಚಾರಣೆ ಎಂದು ಮಾಹಿತಿ ನೀಡಿದ್ದಾರೆ.

ಮುಡಾ ಕೇಸ್‌ನಲ್ಲಿ A1 ಮುಖ್ಯಮಂತ್ರಿ ಸಿದ್ದರಾಮಯ್ಯ, A2 ಸಿದ್ದರಾಮಯ್ಯ ಪತ್ನಿ ಬಿ.ಎನ್.ಪಾರ್ವತಿ, A3 ಆಗಿರುವ ಸಿಎಂ ಬಾಮೈದ ಮಲ್ಲಿಕಾರ್ಜುನಸ್ವಾಮಿ, A4 ದೇವರಾಜು ಅವರನ್ನು ವಿಚಾರಣೆ ಮಾಡಲಾಗಿದೆ. ನಾಲ್ವರು ಆರೋಪಿಗಳನ್ನ ಲೋಕಾಯುಕ್ತ ಕಚೇರಿಯಲ್ಲೆ ವಿಚಾರಣೆ ಮಾಡಿದ್ದೇವೆ. ನಾಲ್ವರ ಹೇಳಿಕೆಗಳನ್ನ ವಿಡಿಯೋ ಆಧಾರಿತ ದಾಖಲಿಸಿಕೊಂಡಿದ್ದೇವೆ.A2 ಪಾರ್ವತಿ ಅವರನ್ನು ವಿಚಾರಣೆ ನಡೆಸಿಲ್ಲ ಎಂಬುದು ಸುಳ್ಳು. ಬೇರೆಡೆ ವಿಚಾರಣೆ ನಡೆಸಿದ್ದಾರೆ ಎಂಬುದು ಕಪೋಲಕಲ್ಪಿತ. ತನಿಖೆಯಲ್ಲಿ ಸಿಕ್ಕಿರುವ ಮಾಹಿತಿ ಬಹಿರಂಗಪಡಿಸುವಂತಿಲ್ಲ ಎಂದಿದ್ದಾರೆ.