ಕರಿಯಾ ಕುಮಾರಸ್ವಾಮಿ ಎಂದಿದ್ದ ಜಮೀರ್ಗೆ ಕೌಂಟರ್ ಕೊಟ್ಟಿದ್ದ ಕುಮಾರಸ್ವಾಮಿ, ನಾನು ಕೆಲವು ವರ್ಷಗಳ ಕಾಲ ಸ್ನೇಹಿತರು ಅಂದುಕೊಂಡಿದ್ದು ತಪ್ಪು. ಆ ದಿನಗಳು ಕರಾಳ ಕಾಲ ನನಗೆ ಎಂದಿದ್ದರು. ಇದೀಗ ಕುಮಾರಸ್ವಾಮಿ ಮಾತಿಗೆ ಬಾಲಕೃಷ್ಣ ಸವಾಲು ಹಾಕಿದ್ದಾರೆ.

ಕುಮಾರಸ್ವಾಮಿ ಇಂದು ಅಗ್ರಗಣ್ಯ ನಾಯಕರಾಗಿ ಬೆಳೆದಿರಬಹುದು. ಇಂದು ಕುಮಾರಸ್ವಾಮಿಗೆ ಯಾರು ಬೇಕಾದರೂ ಸೇವೆ ಮಾಡಬಹುದು. ಆದರೆ ಅಂದು ಕುಮಾರಸ್ವಾಮಿಗೆ ಸೇವೆ ಮಾಡಲು ಯಾರೂ ಇರಲಿಲ್ಲ. ಅಂದು ಬಿಸ್ಲೆರಿ ವಾಟರ್ ವಾಟರ್ ಬಳಸಿ ತೊಳೆದಿದ್ದು ಯಾರು ಎಂದು ಕೇಳಿ ಎಂದಿದ್ದಾರೆ.

ಮೊದಲ ಬಾರಿಗೆ ಬನ್ನೇರುಘಟ್ಟ ರಸ್ತೆಯ ಆಸ್ಪತ್ರೆಯಲ್ಲಿ ಆಪರೇಷನ್ ಆಗಿತ್ತು. ಅಂದು ಕುಮಾರಸ್ವಾಮಿ ಜೊತೆಗೆ ಅವರ ಕುಟುಂಬವೂ ಇರಲಿಲ್ಲ. ಈಗ ಕೊಚ್ಚೆ ಎಂದಿದ್ದಾರಲ್ಲ. ಅದೇ ಕೊಚ್ಚೆ ತೊಳೆದಿದ್ದು ನಾವು. ಈ ಬಗ್ಗೆ ಮಾತನಾಡಲು ಹೇಳಿ ಎಂದು ಸವಾಲು ಎಸೆದಿದ್ದಾರೆ.










