ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅಪರಾಧಿ ಪ್ರಕರಣಗಳಿಗೆ ಕಡಿವಾಣ ಹಾಕುವ ಸಲುವಾಗಿ ಬುಲ್ಡೊಜರ್ ನ್ಯಾಯ ಜಾರಿಯಾಗಿತ್ತು.ಅಪರಾಧ ಮಾಡಿದ ವ್ಯಕ್ತಿಯ ಆಸ್ತಿಗಳನ್ನು ದ್ವಂಸ ಮಾಡಲಾಗ್ತಿತ್ತು.ಆದರೆ ಇದೀಗ ಸುಪ್ರೀಂಕೋರ್ಟ್ ವ್ಯತಿರಿಕ್ತ ಆದೇಶ ನೀಡಿದೆ.
ಬುಲ್ಡೋಜರ್ ನ್ಯಾಯ ಎಂದು ಹೊಸ ಭಾಷ್ಯ ಬರೆದಿದ್ದ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರಕ್ಕೆ ಭಾರಿ ಹಿನ್ನೆಡೆಯಾಗಿದೆ. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬುಲ್ಡೋಜರ್ ನ್ಯಾಯ ಸ್ವೀಕಾರಾರ್ಹವಲ್ಲ. ಎಲ್ಲರಿಗೂ ಕಾನೂನಿನ ಅಡಿಯಲ್ಲಿ ರಕ್ಷಣೆ ಪಡೆಯುವ ಹಕ್ಕು ಇದೆ ಅಂತ ಹೇಳಿದೆ.
ಕಾರ್ಯಂಗವು ನ್ಯಾಯಾಂಗದ ರೀತಿ ವರ್ತಿಸಬಾರದು ಎಂದಿರುವ ಸುಪ್ರೀಂಕೋರ್ಟ್ ಆರೋಪಿಗಳ ಮನೆ ನೆಲಸಮಕ್ಕೆ ಕೆಲವು ಗೈಡ್ಲೈನ್ಸ್ಗಳನ್ನೂ ಹೇಳಿದೆ. ಪೂರ್ವ ನೋಟಿಸ್ ನೀಡದೇ ನೆಲಸಮ ಪ್ರಕ್ರಿಯೆ ಕೈಗೊಳ್ಳಬಾರದು.ವ್ಯಕ್ತಿಗಳಿಗೆ ವಿವರಣೆ ನೀಡಲು ಸಮಯ ನೀಡಬೇಕು.ನೆಲಸಮ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣ ಮಾಡಬೇಕು ಹಾಗೂ ನೆಲಸಮ ಮಾಡಿರುವ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.