ಬಿಗ್ ಬಾಸ್ ಮನೆಯಲ್ಲಿ ದಿನಕ್ಕೆ ಒಂದು ಜಗಳ ಇದ್ದೇ ಇರುತ್ತದೆ. ಇವತ್ತಿನ ಪ್ರೋಮೋದಲ್ಲಿ ಐಶ್ವರ್ಯ ಹಾಗೂ ಗೋಲ್ಡ್ ಸುರೇಶ್ ನಡುವೆ ಮಾತಿನ ಚಕಮಕಿ ಜೋರಾಗಿ ನಡೆಯುತ್ತದೆ.ಅದು ಕೂಡ ಊಟದ ವಿಚಾರಕ್ಕೆ, ಐಶ್ವರ್ಯ ತಟ್ಟೆಗೆ ಊಟ ಬಡಿಸಿಕೊಳ್ತಾ ಇರುವಾಗ ಗೋಲ್ಡ್ ಸುರೇಶ್ ನೋಡ್ಕೊಂಡು ತಿನ್ನಿ ಇನ್ನು ೭ ಜನ ಇದ್ದಾರೆ ಅಂಥ ಹೇಳ್ತಾರೆ.
ಆಗ ಐಶ್ವರ್ಯ ತಟ್ಟೆಯಿಂದ ವಾಪಸ್ ಹಾಕಲು ಹೋಗ್ತಾರೆ..ಆಗ ಮಂಜು ಊಟದ ವಿಚಾರಕ್ಕೆ ಯಾರಿಗೂ ಹೀಗೆ ಮಾಡಬೇಡಿ ಎಂದು ಸುರೇಶ್ ಗೆ ಹೇಳ್ತಾರೆ..ನಂತರ ಐಶ್ವರ್ಯ ನಾನು ಬಡಿಸಿಕೊಂಡಿದ್ದೆ ಸ್ವಲ್ಪ ಅದು ಕೂಡ ನನ್ನ ಭಾಗದ್ದು, ಈಗ ನೀನು ನನಗೆ ಹೇಳ್ತೀರಾ ಎಂಬ ಮಾತುಗಳನ್ನು ಆಡುತ್ತಾರೆ..ಈ ವಿಚಾರ ದೊಡ್ಡದಾಗುತ್ತದೆ.
ಬಿಗ್ ಬಾಸ್ ನ ಇವತ್ತಿನ ಕಾನ್ಸೆಪ್ಟ್ ತುಂಬಾ ವಿಭಿನ್ನವಾಗಿದೆ ,ಅದರಲ್ಲಿ ಒಂದು ಹುಡುಗ ಹಾಗೂ ಒಂದು ಹುಡುಗಿ ಜೋಡಿಯಾಗಿ ಆಟವಾಡಬೇಕು, ಈ ಜೋಡಿಯನ್ನು ಬಿಗ್ ಬಾಸ್ ಆಯ್ಕೆ ಮಾಡಿದ್ದಾರೆ, ಹೇಗೆ ಅಂದ್ರೆ ಕೂಡ ಹಗ್ಗವನ್ನ ಕಟ್ಟಿರುತ್ತಾರೆ ಯಾರು ಕೂಡ ಹಗ್ಗವನ್ನ ಬಿಡಿಸುವಂತಿಲ್ಲ, ಎಲ್ಲಿಗೆ ಹೋಗುವುದಾದರೂ ಯಾವುದೇ ಟಾಸ್ಕ್ ಆಡುವುದಾದರೂ, ಏನೇ ಕೆಲಸ ಮಾಡುವುದಾದರೂ ಆ ಜೋಡಿ ಒಟ್ಟಿಗೆ ಇರಬೇಕು ಹಗ್ಗ ಬಿಚ್ಚಿದರೆ ಔಟ್.