ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ 700 ಕೋಟಿ ವಸೂಲಿ ಮಾಡಿ, ಮಹಾರಾಷ್ಟ್ರ ಚುನಾವಣೆಗೆ ಕಳುಹಿಸಿದ್ದಾರೆ ಎಂದಿದ್ದ ಪ್ರಧಾನಿ ಮೋದಿಗೆ, ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ್ ತಿರುಗೇಟು ನೀಡಿದ್ದಾರೆ. ಪ್ರಧಾನಿ 10 ಸಾವಿರ ಕೋಟಿ ಹೊಡೆದಿದ್ದಾರೆ ಅಂದ್ರೆ ಒಪ್ಪುತ್ತೀರಾ..? ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಪ್ರಶ್ನೆ ಮಾಡಿದ್ದಾರೆ. ಪ್ರಧಾನಿ ಆದಂಥವರು ಸುಳ್ಳು ಆರೋಪಗಳನ್ನು ಮಾಡಬಾರದು. ಉನ್ನತ ಹುದ್ದೆಯಲ್ಲಿರೋ ಮೋದಿ ಅವರಿಗೆ ಶೋಭೆ ತರಲ್ಲ ಅಂತಾ ಹೇಳಿದ್ದಾರೆ.

ಪ್ರಧಾನಿ ಅವರನ್ನು ಮಿಸ್ ಗೈಡ್ ಮಾಡಿದ್ದಾರೆ. ತಪ್ಪು ಮಾಹಿತಿ ಆಧರಿಸಿ ಮೋದಿ ಅವರು ಸುಳ್ಳು ಆರೋಪ ಮಾಡ್ತಿದಾರೆ ಎಂದಿರುವ ಸಚಿವ ತಿಮ್ಮಾಪುರ್, ಬೇರೆ ರಾಜಗಳಲ್ಲಿ ಈ ರೀತಿ ಅಪಪ್ರಚಾರ ಮಾಡೋದು ಸರಿಯಲ್ಲ. ಸುಳ್ಳು ಆರೋಪ ಮಾಡಬೇಡಿ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ನನ್ನನ್ನು ಸಮರ್ಥಿಸಿಕೊಂಡಿಲ್ಲ. ಬದಲಿಗೆ ಸುಳ್ಳು ಆರೋಪ ಅಂತ ಹೇಳಿದ್ದಾರೆ ಎಂದಿದ್ದಾರೆ. ಯಾರ ಮೇಲೆ ಏನು ಬೇಕಾದ್ರೂ ಆರೋಪ ಮಾಡಬಹುದೇ..? ಎಂದಿರುವ ತಿಮ್ಮಾಪುರ್, ಕಾಂಗ್ರೆಸ್ ವಿರುದ್ಧ ವಿವಾದಗಳನ್ನು ಸೃಷ್ಟಿಲಾಗುತ್ತಿದೆ. ಇದು ಬಿಜೆಪಿಯವರ ರಾಜಕಾರಣ ಎಂದಿದಾರೆ.

ಅಬಕಾರಿ ಇಲಾಖೆಯಲ್ಲಿ ಹಣ ವಸೂಲಿ ಮಾಡಿ ಚುನಾವಣೆ ನಡೆಸುವ ಬಗ್ಗೆ ಬಿಜೆಪಿ ಆರೋಪಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರತಿಪಕ್ಷ ನಾಯಕ ಆರ್ ಅಶೋಕ್‌ಗೆ ಸವಾಲು ಹಾಕಿರುವ ಸಚಿವ ರಾಮಲಿಂಗರೆಡ್ಡಿ, ಹಣ ತಂದಿರುವ ಬಗ್ಗೆ ಫ್ರೂವ್ ಮಾಡಿದ್ರೆ ಸಿಎಂ ಸೇರಿ ನಾವೆಲ್ಲರೂ ರಾಜೀನಾಮೆ ಕೊಡಲು ಸಿದ್ದ. ಇಲ್ಲವಾದಲ್ಲಿ ನರೇಂದ್ರ ಮೋದಿ, ಅಶೋಕ್ ರಾಜೀನಾಮೆ ಕೊಡ್ತಾರಾ…? ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಅವರು ಬುರುಡೆಗಳು, ಭ್ರಷ್ಟಾಚಾರಿಗಳು ಎಂದು ಚಾಟಿ ಬೀಸಿದ್ದಾರೆ.










