• Home
  • About Us
  • ಕರ್ನಾಟಕ
Wednesday, January 14, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಅನ್ನಪೂರ್ಣ ತುಕಾರಾಮ್ ಅವರು ಸಂಡೂರು ಕ್ಷೇತ್ರದಿಂದ ಗೆಲ್ಲುವುದು ನೂರಕ್ಕೆ ನೂರು ಸತ್ಯ:ಸಿಎಂ ಘೋಷಣೆ

ಪ್ರತಿಧ್ವನಿ by ಪ್ರತಿಧ್ವನಿ
November 10, 2024
in Top Story, ಇತರೆ / Others, ಕರ್ನಾಟಕ, ರಾಜಕೀಯ
0
Share on WhatsAppShare on FacebookShare on Telegram

ಸಂಡೂರು: ಶ್ರೀರಾಮುಲು ಸಾರಿಗೆ ಸಚಿವರಾಗಿ ಸಂಡೂರಿಗೆ ಒಂದೇ ಒಂದು ಬಸ್ಟಾಂಡ್ ಕಟ್ಟಿಸಲಿಲ್ಲ. ಒಂದೇ ಒಂದು ಬಸ್ ಕೂಡ ಬಿಡಲಿಲ್ಲ.ಮೊನ್ನೆ ನಮ್ಮ ಸರ್ಕಾರ ಬಂದ ಮೇಲೆ 200 ಹೊಸ ಬಸ್ ಗಳನ್ನು ಬಿಟ್ಟಿದ್ದೇವೆ.ಶ್ರೀರಾಮುಲು ಆರೋಗ್ಯ ಸಚಿವರಾಗಿ ಸಂಡೂರಿಗೆ ಒಂದೇ ಒಂದು ಆಸ್ಪತ್ರೆ ಕೊಡಲಿಲ್ಲ.ನಾವು 100 ಬೆಡ್ ಗಳ ಆಸ್ಪತ್ರೆ ಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ADVERTISEMENT

ಸಂಡೂರಿನಲ್ಲಿ ನಡೆದ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮತನಾಡಿದರು.ಅನ್ನಪೂರ್ಣ ತುಕಾರಾಮ್ ಅವರು ಸಂಡೂರು ಕ್ಷೇತ್ರದಿಂದ ಗೆಲ್ಲುವುದು ನೂರಕ್ಕೆ ನೂರು ಸತ್ಯ.ಟಿಕೆಟ್ ಘೋಷಣೆಗೂ ಮೊದಲೇ ನಾವು ಸಂಡೂರು ಕ್ಷೇತ್ರದಲ್ಲಿ ನಡೆಸಿದ ಎಲ್ಲಾ ಜನ ಸಮೀಕ್ಷೆಗಳಲ್ಲೂ ಅನ್ನಪೂರ್ಣ ಅವರ ಪರವಾಗಿಯೇ ಇತ್ತು.ಹೀಗಾಗಿ ಇವರನ್ನೇ ಅಭ್ಯರ್ಥಿಯಾಗಿ ಘೋಷಿಸಿದೆವು.

ಲೋಕಸಭಾ ಚುನಾವಣೆಯಲ್ಲೂ ಈ.ತುಕಾರಾಮ್ ಅವರ ಪರವಾಗಿಯೇ ಎಲ್ಲಾ ಸಮೀಕ್ಷಾ ವರದಿಗಳು ಇದ್ದಿದ್ದರಿಂದ ಹೈಕಮಾಂಡ್ ತುಕಾರಾಮ್ ಅವರ ಹೆಸರನ್ನೇ ಘೋಷಿಸಿತು.ಸಮೀಕ್ಷೆಯಂತೆ ಲೋಕಸಭಾ ಚುನಾವಣೆಯಲ್ಲಿ ಈ.ತುಕಾರಾಮ್ ಗೆದ್ದರು. ಈಗ ಸಂಡೂರು ಉಪ ಚುನಾವಣೆಯಲ್ಲೂ ಅನ್ನಪೂರ್ಣ ತುಕಾರಾಮ್ ಅವರೇ ಗೆಲ್ತಾರೆ.

ನಾನು ಮೂರು ದಿನಗಳಿಂದ ಇಡೀ ಸಂಡೂರು ಕ್ಷೇತ್ರ ದಲ್ಲಿ ಪ್ರವಾಸ ಮಾಡಿದ್ದೇನೆ. ಒಟ್ಟು 18 ಬೃಹತ್ ಬಹಿರಂಗ ಸಭೆಗಳನ್ನು ನಡೆಸಿದ್ದೇವೆ. ಒಟ್ಟು ಒಂದೂವರೆ ಲಕ್ಷದಷ್ಟು ಜನ‌ ಈ 18 ಬಹಿರಂಗ ಸಭೆಗಳಿಗೆ ಬಂದಿದ್ದಾರೆ. ಅವರೆಲ್ಲರ ಉತ್ಸಾಹ ಕೂಡ ಅನ್ನಪೂರ್ಣಮ್ಮ‌ ಅವರ ಪರವಾಗಿಯೇ ಇದೆ. ಆದ್ದರಿಂದ ನಾನು ಹೇಳ್ತೀನಿ ಇಲ್ಲಿ ಅನ್ನಪೂರ್ಣಮ್ಮ ಅವರು ಗೆಲ್ಲುವುದು ನೂರಕ್ಕೆ ನೂರು ಸತ್ಯ ಎಂದರು.

ನಾವು ಜನರ ಕಲ್ಯಾಣಕ್ಕೆ ಕೆಲಸ ಮಾಡಿ, ಜನರ ಆರ್ಥಿಕ ಶಕ್ತಿ ಹೆಚ್ವಿಸುವ ಯೋಜನೆಗಳನ್ನು-ಗ್ಯಾರಂಟಿಗಳನ್ನು ಜಾರಿ ಮಾಡಿ ಓಟು ಕೇಳುತ್ತಿದ್ದೇವೆ. ನಾವು ಕೆಲಸ ಮಾಡಿ ಕೂಲಿ ಕೇಳ್ತಾ ಇದೀವಿ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಸಂಡೂರಿನ‌ ಅಭಿವೃದ್ಧಿ ಕಡೆ ಗಮನವನ್ನೇ ಕೊಡಲಿಲ್ಲ.ಭ್ರಷ್ಟಾಚಾರ ಮಾಡಿ ಹಣ ಲೂಟಿ ಮಾಡಿಕೊಂಡು ಮನೆ ಸೇರಿದರು.ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಜೆ ಬಂದು, ಮೋದಿ ಪ್ರಧಾನಿಯಾಗಿ 11 ವರ್ಷ ಆಯ್ತು. ಆದರೂ ಬೆಲೆ ಏರಿಕೆಗೆ ಬ್ರೇಕ್ ಹಾಕಲಿಲ್ಲ. ಮೋದಿ ಭಾಷಣದಲ್ಲಿ ಹೇಳಿದ ಅಚ್ಛೆ ದಿನ ಭಾರತೀಯರ ಪಾಲಿಗೆ ಇವತ್ತಿನವರೆಗೂ ಬರಲಿಲ್ಲ.

ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ, ರಸಗೊಬ್ಬರ, ಅಕ್ಕಿ ಬೇಳೆ, ಎಣ್ಣೆ ಸೇರಿ ಯಾವುದರ ಬೆಲೆಯೂ ಕಡಿಮೆ ಆಗಲಿಲ್ಲ. ಬೆಲೆ ಏರಿಕೆಗೆ ಬ್ರೇಕ್ ಹಾಕ್ತೀನಿ ಎಂದು ಭಾರತೀಯರನ್ನು ನಂಬಿಸಿ ಬಕ್ರಾ ಮಾಡಿ ಅಧಿಕಾರಕ್ಕೆ ಬಂದು ಯಾವ ಬೆಲೆಗಳನ್ನೂ ಇಳಿಸಲಿಲ್ಕ.

ಬದಲಿಗೆ ಭಾರತೀಯರನ್ನು, ಭಾರತವನ್ನು ದೊಡ್ಡ ಸಾಲಗಾರ ಮಾಡಿಟ್ಟರು. ಮೋದಿ ಪ್ರಧಾನಿ ಆಗುವ ಮೊದಲು 1947 ರಿಂದ 2014 ರ ವರೆಗೂ ಭಾರತದ ಸಾಲ ಇದ್ದದ್ದು 54 ಲಕ್ಷ ಕೋಟಿ ಮಾತ್ರ. ಆದರೆ ಮೋದಿ ಒಬ್ಬರೇ 2014 ರಿಂದ 2024 ರ ವರೆಗೂ 135 ಲಕ್ಷ ಕೋಟಿ ಸಾಲ ಮಾಡಿ ಭಾರತದ ಸಾಲವನ್ನು 184 ಲಕ್ಷ ಕೋಟಿಗೆ ಏರಿಸಿದ್ದಾರೆ. ಇದೇ ಮೋದಿಯ ಪಾಲಿನ ಅಚ್ಛೆ ದಿನ್ ಆದರೆ, ಇವು ಭಾರತೀಯರ ಪಾಲಿಗೆ ಕೆಟ್ಟ ದಿನಗಳಾಗಿವೆ.

ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಎಂದು ಭಾಷಣ ಮಾಡಿದ ಮೋದಿ, ರೈತರ ಆದಾಯ ಮೂರು ಪಟ್ಟು ಆಗುವಂತೆ ಮಾಡಿದರು.ಕಪ್ಪು ಹಣ ತರಲಿಲ್ಲ. ಭಾರತೀಯರ ಅಕೌಂಟಿಗೆ ತಲಾ 15 ಲಕ್ಷ ಹಾಕ್ತೀನಿ ಎಂದು ಭಾಷಣ ಮಾಡಿದ್ದ ಮೋದಿಯವರ ಮಾತು ಇನ್ನೂ ಭಾಷಣದೊಳಗೇ ಉಳಿದಿದೆ ಹೊರತು ಒಬ್ಬ ಭಾರತೀಯನ ಅಕೌಂಟಿಗೂ ಹಣ ಬರಲಿಲ್ಲ ಎಂದರು.

ರಾಜ್ಯದಲ್ಲಿ ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 165 ಭರವಸೆಗಳಲ್ಲಿ 158 ನ್ನು ಈಡೇರಿಸಿದ್ದೇನೆ.ಹತ್ತು ಹಲವು ಭಾಗ್ಯಗಳನ್ನು ಕೊಟ್ಟಿದ್ದೇನೆ ಎಂದರು.

ನಾವು ಕೆಲಸ ಮಾಡಿ ಕೂಲಿ ಕೇಳುತ್ತಿದ್ಸೇವೆ. ನಮ್ಮ ಪ್ರತೀ ಕೆಲಸಗಳೂ ನಿಮ್ಮ ಮನೆ ಬಾಗಿಲಿವೆ ತಲುಪಿವೆ. ಆದರೆ ಬಿಜೆಪಿಯವರ ಸುಳ್ಳುಗಳು ನಿಮ್ಮ ಮನೆ ಬಾಗಿಲಿಗೆ ಬಂದಿವೆಯೇ ಹೊರತು, ನಿಮ್ಮ ಬದುಕಿಗೆ ಭರವಸೆಯಾಗುವ ಒಂದೇ ಒಂದು ಬಿಜೆಪಿಯ ಯೋಜನೆಗಳೂ ನಿಮ್ಮ ಮನೆ ಬಾಗಿಲಿಗೆ ಬಂದಿಲ್ಲ. ಯಾವ ಮುಖ ಹೊತ್ತುಕೊಂಡು ಬಿಜೆಪಿಯವರು ನಿಮ್ಮ ಮತ ಕೇಳಲು ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ ಎಂದು ಪ್ರಶ್ನಿಸಿದರು.

Tags: By election sandur.CM Siddaramaiah‌Congress Partynot give a single hospital to Sanduri.SandurSandur constituencywe have given a 100-bed hospital.we released 200 new buses.
Previous Post

ಬಿ.ವೈ.ವಿಜಯೇಂದ್ರ & ತೇಜಸ್ವಿಸೂರ್ಯ ಬಂಧಿಸುವಂತೆ ಕಾಂಗ್ರೆಸ್ ಪ್ರೊಟೆಸ್ಟ್ – ವಕ್ಫ್ ವಿಚಾರದಲ್ಲಿ ರಾಜಕಾರಣಕ್ಕೆ ಕಾಂಗ್ರೆಸ್ ಕಿಡಿ ! 

Next Post

1990 ರಲ್ಲಿ ಕಾಶ್ಮೀರದಿಂದ ಓಡಿಸಲ್ಪಟ್ಟಿದ್ದ ಪಂಡಿತರ ವಾಪಸಾತಿಗೆ ಕೇಂದ್ರ ಸರ್ಕಾರದ ಕ್ರಮ

Related Posts

Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
0

ಬೆಂಗಳೂರು: ನಾನು ಎಂಎಲ್ಎ ಆದ ಮೇಲೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಯಾವ ಜಾತಿ ಗಲಭೆ, ಜಾತಿ ರಾಜಕಾರಣ, ಪೊಲೀಸರ ಮೇಲೆ ಒತ್ತಡ, ಒತ್ತಾಯ ಮಾಡಿಲ್ಲ.ಕುವೆಂಪುರವರು ಹೇಳಿದಂತೆ ನಮ್ಮ...

Read moreDetails

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

January 13, 2026
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

January 13, 2026
ಪೊಲೀಸರ ಮೇಲಿನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್

ಪೊಲೀಸರ ಮೇಲಿನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್

January 13, 2026
Next Post

1990 ರಲ್ಲಿ ಕಾಶ್ಮೀರದಿಂದ ಓಡಿಸಲ್ಪಟ್ಟಿದ್ದ ಪಂಡಿತರ ವಾಪಸಾತಿಗೆ ಕೇಂದ್ರ ಸರ್ಕಾರದ ಕ್ರಮ

Recent News

Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
Top Story

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

by ಪ್ರತಿಧ್ವನಿ
January 13, 2026
ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!
Top Story

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

by ಪ್ರತಿಧ್ವನಿ
January 13, 2026
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ
Top Story

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
Top Story

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

January 13, 2026

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada