ಬಿಗ್ ಬಾಸ್ ಮನೆಯಲ್ಲಿ ವಾರದಿಂದ ವಾರಕ್ಕೆ ವಿಭಿನ್ನವಾದ ಟಾಸ್ಕ್ ಗಳನ್ನ ನೀಡಲಾಗುತ್ತದೆ ಸ್ಪರ್ಧಿಗಳು ಟಾಸ್ಕ್ ಆಡುವ ಜೋಶ್ ನಲ್ಲಿ ಜಗಳವನ್ನು ಕೂಡ ಜೋರಾಗಿ ಆಡುತ್ತಿದ್ದಾರೆ. ಪ್ರತಿಯೊಂದು ಟಾಸ್ಕ್ ನಲ್ಲೂ ಕೂಡ ಒಬ್ಬೊಬ್ಬ ಕಂಟೆಸ್ಟೆಂಟ್, ಇನ್ನೊಬ್ಬರ ಜೊತೆ ಮನಸ್ಸ್ತಾಪವನ್ನ ಹೆಚ್ಚು ಮಾಡಿಕೊಳ್ಳುತ್ತಾನೆ ಇದಾರೆ.
ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಮೂರು ಜನವಿರುವಂತಹ ನಾಲ್ಕು ಗುಂಪುಗಳನ್ನು ವಿಂಗಡನೆ ಮಾಡಲಾಗಿತ್ತು. ಪ್ರತಿಯೊಂದು ಗುಂಪಿಗೂ ಒಬ್ಬರು ನಾಯಕರಿದ್ದಾರೆ. ಅದರಲ್ಲಿ ಗೌತಮಿ ,ಮಂಜು, ಶಿಶಿರ್ ಹಾಗೂ ಚೈತ್ರ ಅವರು ಒಂದೊಂದು ಗುಂಪಿನ ನಾಯಕರಾಗಿದ್ದಾರೆ. ಹಾಗೂ ಪ್ರತಿ ಗುಂಪಿನಲ್ಲೂ ಇಬ್ಬರು ಹುಡುಗಿಯರು ಹಾಗೂ ಒಬ್ಬ ಹುಡುಗ ಕಂಟೆಸ್ಟೆಂಟ್ ಇರ್ಲೇಬೇಕು.

ನಿನ್ನೆ ಆಡಿಸಿದ ಲೂಡೋ ಅಂದ್ರೆ ನಾಮಿನೇಷನ್ ಟಾಸ್ಕ್ ನಲ್ಲಿ ಒಂದಿಷ್ಟು ಜನ ಕಂಟೆಸ್ಟೆಂಟ್ ಸೇಫ್ ಆದ್ರೆ ಇನ್ನು ನಾಮಿನೇಟ್ ಆಗಿದ್ದಾರೆ. ಭವ್ಯ ,ಅನುಷಾ ,ತ್ರಿವಿಕ್ರಮ್, ಚೈತ್ರ ಹಾಗೂ ಧರ್ಮ ನಾಮಿನೇಟ್ ಆಗಿದ್ದಾರೆ.
ಸದ್ಯ ಬಿಗ್ ಬಾಸ್ ನ ಇಂದಿನ ಪ್ರೊಮೋ ಹೊರ ಬಿದ್ದಿದೆ. ಅದರಲ್ಲಿ ಒಂದು ದೊಡ್ಡ ಚಂಡನ್ನು ಇಟ್ಟು, ಎರಡು ಗೋಲ್ಗಳನ್ನು ನಿರ್ಮಿಸಿರುತ್ತಾರೆ. ಹಾಗೂ ಎರಡು ಗುಂಪಿನ ಇಬ್ಬರು ಹುಡುಗಿಯರು ಇಟ್ಟಿರುವ ಚೆಂಡನ್ನು ಗೋಲ್ ಒಳಗೆ ಹಾಕಬೇಕು.ಯಾರು ಮೊದಲೂ ಗೋಲ್ ರೀಚ್ ಮಾಡಿಸುತ್ತಾರೋ ಅವರು ಆ ಟಾಸ್ಕ್ ನ ಗೆದ್ದ ಹಾಗೇ.

ಆದ್ರೆ ಈ ಟಾಸ್ಕ್ ನಡೆಯುವಾಗ ಹನುಮಂತ ಜಡ್ಜ್ಮೆಂಟ್ ನೀಡಬೇಕಾಗಿರುತ್ತದೆ. ಆದರೆ ಹನುಮಂತನ ಜಡ್ಜ್ಮೆಂಟ್ ಇಷ್ಟ ಆಗದೆ ಗೌತಮಿ ಹಾಗೂ ಚೈತ್ರ ಅವರು ಹನುಮಂತನ ಮೇಲೆ ರೇಗಾಡುತ್ತಾರೆ.ಆದರೆ ಯಾರದ್ದು ಸರಿ ಯಾರದ್ದು ತಪ್ಪು ಎಂದು ತಿಳಿಯಬೇಕಾದರೆ ಇವತ್ತಿನ ಎಪಿಸೋಡ್ ನೋಡ್ಬೇಕು.