ಬೆಳಕಿನ ಹಬ್ಬ ದೀಪಾವಳಿಯ (Deepavali) ಸಂಭ್ರಮ ಮುಗಿದ ಬೆನ್ನಲೇ, ಇದೀಗ ವಾಯು ಮಾಲಿನ್ಯದ (Air pollution) ಆತಂಕ ಚಿಂತೆಗೀಡು ಮಾಡಿದೆ. ದೀಪಾವಳಿಯ ರಾತ್ರಿ ದೆಹಲಿಯಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ನಲ್ಲಿ (Air quality Index) ಗುಣಮಟ್ಟ 999 ಕ್ಕೆ ಕುಸಿತಗೊಂಡಿದೆ.
ಇನ್ನು ಸಾಕಷ್ಟು ಪ್ರದೇಶಗಳಲ್ಲಿ ಗರಿಷ್ಠ ಮಟ್ಟದ ವಾಯು ಮಾಲಿನ್ಯ ದಾಖಲಾಗಿದ್ದು, ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 999 ಕ್ಕೆ ಕುಸಿತವಾಗಿದೆ. ದೆಹಲಿಯಲ್ಲಿ (Delhi) ಶೇಕಡಾ 69 ರಷ್ಟು ಕುಟುಂಬಗಳಿಗೆ ವಾಯು ಮಾಲಿನ್ಯದಿಂದ ಆರೋಗ್ಯ ತೊಂದರೆ ಕಾಣಿಸಿಕೊಂಡಿದೆ.
ವಾಯು ಮಾಲಿನ್ಯದಿಂದ ಹಲವರಲ್ಲಿ ಗಂಟಲು ನೋವು, ಕಣ್ಣು ಉರಿ, ಕಫ ಸೇರಿದಂತೆ ವಿವಿಧ ಅನಾರೋಗ್ಯಕ್ಕೆ ದೆಹಲಿ ಜನ ಗುರಿಯಾಗಿದ್ದಾರೆ. ದೆಹಲಿಯ ಲೋಕಲ್ ಸರ್ಕಲ್ ಎಂಬ ಡಿಜಿಟಲ್ ಪ್ಲಾಟ್ ಫಾರಂನಲ್ಲಿ 22 ಸಾವಿರ ಮಂದಿಯಿಂದ ಮಾಹಿತಿ ಸಂಗ್ರಹ ಮಾಡಲಾಗಿದೆ.