ಬೊಂಬೆನಾಡು ಚನ್ನಪಟ್ಟಣದಲ್ಲಿ (Channapatna) ರಾಜಕೀಯ ಅಧಿಪತ್ಯ ಸಾಧಿಸೋಕೆ ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (Jds) ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸ್ತಿವೆ. ಈ ಮಧ್ಯೆ ಅಚ್ಚರಿ ಎಂಬಂತೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಪರ ಕಾಂಗ್ರೆಸ್‌ನ ಕೆಲ ನಾಯಕರು ಸಾಫ್ಟ್ ಕಾರ್ನರ್ ತೋರಿಸ್ತಿದ್ದಾರೆ ಎಂಬ ಚರ್ಚೆ ಜೋರಾಗಿದೆ.

ಕೇಂದ್ರ ಸಚಿವ ಹೆಚ್.ಡಿ.ಕೆ (HDK) ವಿರುದ್ಧ ಈಗಾಗಲೇ ಅಟ್ಯಾಕ್ ಮಾಡ್ತಿರೋ ರಾಜ್ಯ ಕಾಂಗ್ರೆಸ್ ಸಚಿವರು, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ವಿರುದ್ಧ ಮಾತ್ರ ತುಟಿ ಬಿಚ್ಚಿಲ್ಲ. ಜೆಡಿಎಸ್‌ನಿಂದ ಕಾಂಗ್ರೆಸ್ ಸೇರಿರುವ ಕೆಲ ನಾಯಕರು ನಿಖಿಲ್ ಬಗ್ಗೆ ಮೌನ ವಹಿಸಿದ್ದು, ನಿಖಿಲ್ ಬಗ್ಗೆ ಮಾತಾಡೋದು ಬೇಡವೆಂದು ತೀರ್ಮಾನಿಸಿದ್ದಾರಂತೆ.
ಇನ್ನುಳಿದಂತೆ ಸಚಿವ ಚಲುವರಾಯಸ್ವಾಮಿ (Cheluvarayaswamy), ಸಚಿವ ಜಮೀರ್ ಅಹ್ಮದ್ (Zameer Ahamed) ಸೇರಿದಂತೆ ಹಲವರು ನಿಖಿಲ್ ಕುಮಾರಸ್ವಾಮಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದಾರೆ ಎಂಬ ಚರ್ಚೆ ಈ ಭಾಗದಲ್ಲಿ ಶುರುವಾಗಿದೆ.