ಟಗರು ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ತನ್ನ ವಿಭಿನ್ನ ನಟನೆಯಿಂದ ಜನರ ಮನಗೆದ್ದ ಧನಂಜಯ್ ಸದ್ಯ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ..
ಇಂದು ಎಲ್ಲೆಡೆ ದೀಪಾವಳಿ ಹಾಗೂ ಕನ್ನಡ ಡಾ ಸಂಭ್ರಮ ಮನೆ ಮಾಡಿದೆ.ಇದರ ಮಧ್ಯ ಡಾಲಿ ಹೊಸ ವಿಚಾರವನ್ನು ಕೂಡ ಹಂಚಿಕೊಂಡಿದ್ದಾರೆ.ಹೌದು ಇಷ್ಟು ದಿನ ಯಾವುದೇ ಇಂಟರ್ವ್ಯೂ ಅಥವಾ ಇತರೆ ಸಂಧರ್ಬದಲ್ಲಿ ಸಾಮಾನ್ಯವಾಗಿ ಮೋಸ್ಟ ಎಲಿಜಿಬಲ್ ಬ್ಯಾಚುಲರ್ಸ್ ಕೇಳುವ ಪ್ರಶ್ನೆ ನಿಮ್ಮ ಮದುವೆ ಯಾವಾಗ ಅಂತ.ಸದ್ಯ ಡಾಲಿ ತಮ್ಮ ಮನದರಸಿಯನ್ನು ಕನ್ನಡ ಜನತೆಗೆ ಪರಿಚಯ ಮಾಡಿಕೊಟ್ಟಿದ್ದಾರೆ ಹಾಗೂ ಎಲ್ಲಾರ ಪ್ರಶ್ನೆಗೆ ಉತ್ತರ ನೀಡಿದ್ದಾರೆ..
ಚಿತ್ರರಂಗದ ಹುಡುಗಿಯನ್ನು ಮದುವೆ ಮಾಡಿಕೊಳ್ತಾರೆ ಡಾಲಿ ಎಂಬ ಒಂದಿಷ್ಟು ಮಾತುಗಳು ಹರಿದಾಡ್ತಾ ಇತ್ತು..ಆದ್ರೆ ಡಾಲಿ ಮದುವೆ ಆಗ್ತಾ ಇರೋದು ಡಾಕ್ಟರ್ ನ. ಯೆಸ್ ಇವರ ಹೆಸರು ಧನತ್ಯಾ ,ಗೈನೋಕಾಲಾಜಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಸದ್ಯ ಡಾಲಿ ಜೊತೆ ಹಸೆ ಮಣೆ ಏರಲು ರೆಡಿ ಆಗಿದ್ದಾರೆ.
ಇದೀಗಾ ಧನಂಜಯ್ ತಮ್ಮ ಭಾವಿ ಪತ್ನಿ ಜೊತೆಗಿನ ಸುಂದರವಾದ ವಿಡೀಯೋ ಶೇರ್ ಮಾಡುವ ಮೂಲಕ ಮದುವೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಮದುವೆ ಡೇಟ್ ಯಾವಾಗ ಅನ್ನುವ ಪ್ರಶ್ನೆಗೆ ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗೌಂಡ್ನಲ್ಲಿ ಡಾಲಿ ಮತ್ತು ಧನ್ಯತಾ ಮದುವೆ ನಡೆಯಲಿದೆ.ಮೈಸೂರು ಧನಂಜಯ ಮತ್ತು ಧನ್ಯತಾ ಇಬ್ಬರಿಗೂ ಎಮೋಷನಲಿ ಕನೆಕ್ಟ್ ಆದ ಸ್ಥಳ ಹಾಗಾಗಿ ಅಲ್ಲಿಯೇ ಹಸೆಮಣೆ ಏರುವ ನಿರ್ಧಾರ ಮಾಡಿದ್ದಾರೆ.
ಧನ್ಯತಾ ಚಿತ್ರದುರ್ಗ ಮೂಲದವರು ಹಾಗೂ ಕುಶಿಯ ವಿಚಾರ ಅಂದ್ರೆ ಅಪ್ಪಟ ಕನ್ನಡತಿ, ಓದಿದ್ದು ಮೈಸೂರಿನಲ್ಲಿ. ಇನ್ನು ಡಾಲಿ ಮತ್ತು ಧನ್ಯತಾ ಇಬ್ಬರು ಅನೇಕ ವರ್ಷಗಳ ಪರಿಚಯವಿತ್ತು , ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಮದುವೆಗೆ ಸಿದ್ಧರಾಗಿದ್ದಾರೆ.