ಕರ್ನಾಟಕದ (Karnataka) ಲಾರಿ ಡ್ರೈವರ್ ಮೇಲೆ ತಮಿಳುನಾಡು ಸಂಚಾರಿ ಪೊಲೀಸ್ ಪೇದೆ (Tamil nadu police) ಮನಸೋ ಇಚ್ಚೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಹೊಸೂರು ಬಾರ್ಡರ್ (Hosur border) ಬಳಿ ನಡೆದಿದ್ದು, ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅತಿ ವೇಗವಾಗಿ ವಾಹನ ಚಾಲನೆ ಮಾಡಿದಕ್ಕೆ ತಮಿಳುನಾಡು ಸಂಚಾರಿ ಪೊಲೀಸ್ ಪೇದೆ ಲಾರಿಯನ್ನ ಅಡ್ಡಗಟ್ಟಿ ಚಾಲಕನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದು, ತಮಿಳುನಾಡು ಪೋಲಿಸ್ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಈ ಬಗ್ಗೆ ವಿಡೊಯೋ ಪೋಸ್ಟ್ ಮಾಡಿರುವ ರೂಪೇಶ್ ರಾಜಣ್ಣ (Rooprsh rajanna), ಈ ರೀತಿ ಕನ್ನಡಿಗನ ಮೇಲೆ ಹಲ್ಲೆ ಮಾಡಿರುವ ತಮಿಳುನಾಡು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.