ಕನ್ನಡ ರಾಜ್ಯೋತ್ಸವದ (Kannada rajyotsava) ಸನಿಹದಲ್ಲೇ ರಾಜ್ಯದ ಗಡಿಭಾಗದಲ್ಲಿ ಕಾಂಗ್ರೆಸ್ ಶಾಸಕನಿಂದ (Congress MLA) ದೊಡ್ಡ ಎಡವಟ್ಟು ನಡೆದಿದ್ದು, ಕನ್ನಡಿಗರಿಂದ, ಕನ್ನಡ ಪರ ಸಂಘಟನೆಗಳಿಂದ ತೀವ್ರ ಆಕೋಶ್ರ ವ್ಯಯಕ್ತವಾಗಿದೆ. ನಮ್ಮ ನೆಲದಲ್ಲಿ ಮರಾಠಿ (Marati) ಪ್ರೇಮ ಮೆರೆದು ಶಾಸಕ ರಾಜು ಕಾಗೆ ಕನ್ನಡಿಗರ ಸಹನೆ ಕೆಣಕಿದ್ದಾರೆ.

ಈಗಾಗಲೇ ಬೆಳಗಾವಿಯ (Belagavi) ಮಂಗಸೂಳಿ ಗ್ರಾಮದಲ್ಲಿ ಕರಾಳ ದಿನ ಆಚರಣೆ ಮಾಡದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಆದ್ರೆ ಜನಪ್ರತಿನಿಧಿ ಏನಿಸಿಕೊಂಡ ಶಸಕ ರಾಜು ಕಾಗೆ (Raju kage) ಬಹಿರಂಗ ಸಭೆಯಲ್ಲಿ ಮರಾಠಿ ಭಾಷಣ ಮಾಡಿ ಕನ್ನಡಿಗರನ್ನು ಕೆರಳಿಸಿದ್ದಾರೆ.
ಮಹಾರಾಷ್ಟ್ರ (Maharshtra) ಗಡಿ ಗ್ರಾಮಗಳಲ್ಲಿ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಎಲ್ಲೆಡೆ ಪೂರ್ವ ಸಿದ್ಧತೆ ನಡೆದಿದ್ದು ಅನ್ಯ ಭಾಷಿಯ ಬ್ಯಾನರ್‌ಗಳ ತೆರವು ಮಾಡುವಂತೆ ತಾಲೂಕಡಾಳಿತ ಕಟ್ಟಿನಿಟ್ಟಿನ ಕ್ರಮ ವಹಿಸಿದೆ. ಇಷ್ಟೆಲ್ಲದರ ಮಧ್ಯೆ ಶಾಸಕರ ಈ ಮರಾಠಿ ಭಾಷಣ ತೀವ್ರ ವಿರೋಧಕ್ಕೆ ಕಾರಣವಾಗಿದೆ.