ರಾಜ್ಯದ ಬಾಗಲಕೋಟೆಯ (Bagalakot) ತೇರದಾಳ ಪಟ್ಟಣದ ಆರಾಧ್ಯ ದೇವರು ಶ್ರೀ ಅಲ್ಲಮಪ್ರಭು (Allama prabhu) ದೇವರ ಜಾತ್ರೆಯ ನಿಮಿತ್ಯ ಶೇಂಗಾ ಹೋಳಿಗೆ ಜಾತ್ರೆ ನಡೆಯಿತು. ಅಲ್ಲಮಪ್ರಭು ದೇವಸ್ಥಾನದ ನೂತನ ಕಟ್ಟಡದ ಲೋಕಾರ್ಪಣಾ ಕಾರ್ಯಕ್ರಮ ಅಂಗವಾಗಿ ಕಳೆದ 15 ದಿನಗಳಿಂದ ಪುರಾಣ ಪ್ರವಚನ, ಪ್ರಸಾದ ಸೇವೆ ನಡೆಯುತ್ತಿದೆ.
ಸುಮಾರು ಒಂದು ತಿಂಗಳು ಕಾಲ ಈ ಜಾತ್ರಾ ಮಹೋತ್ಸವ ನಡೆಯಲಿದ್ದು. ಇದರ ಅಂಗವಾಗಿ ತೇರದಾಳ ಮತ್ತು ಸುತ್ತ ಮುತ್ತಲಿನ ಹಳ್ಳಿಗಳಿಂದ ಸಾವಿರಾರು ಮಹಿಳೆಯರು ಲಕ್ಷಕ್ಕೂ ಹೆಚ್ಚು ಶೇಂಗಾ ಹೋಳಿಗೆ ತಯಾರಿಸಿಕೊಂಡು ಬಂದಿದ್ರು.
ನೀಲಕಂಟೆಶ್ವರ ದೇವಸ್ಥಾನದಿಂದ (Neelakanteshwara temple) ಅಲ್ಲಮಪ್ರಭು ದೇವಸ್ತಾನದವರೆಗೆ ಸುಮಾರು 3 ಕಿಲೋ ಮೀಟರ್ ಪಾದಯಾತ್ರೆ ಮೂಲಕ ಸಂಚರಿಸಿದರು. ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾಗಿ ಪ್ರಭುದೇವರ ಗುಡಿ ಬಳಿ ಬಂದು ತಮ್ಮ ತನುಮನಪೂರ್ವಕವಾಗಿ ಶೇಂಗಾ ಹೋಳಿಗೆ ಪ್ರಸಾದ ಭಕ್ತಿಯಿಂದ ಸಮರ್ಪಿಸಿದರು.