ಮಾಜಿ ಸಚಿವನಿಗೆ ಹನಿ ಟ್ರ್ಯಾಪ್ ಮಾಡಿ ಬ್ಲಾಕ್ ಮೇಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ, 15 ನೇ ತಾರೀಖು ಈ ಮಂಜುಳಾ ಮಾಜಿ ಸಚಿವರಿಗೆ ಪರಿಚಯವಾಗಿದ್ದು, 25ನೇ ತಾರೀಖು ಎಫ್ ಐ ಆರ್ ದಾಖಲಾಗಿದೆ. ಕೇವಲ ಹತ್ತೇ ದಿನದಲ್ಲಿ ಹಳ್ಳಕ್ಕೆ ಕೆಡವಲು ಹೋಗಿ ಮಂಜುಳಾ ಲಾಕ್ ಆಗಿದ್ದಾಳೆ.
ಮಾಜಿ ಸಚಿವನ ಹನಿ ಖೆಡ್ಡಾಗೆ ಕೆಡವಲು ಮಂಜುಳಾ ಐನಾತಿ ಪ್ಲಾನ್ ಮಾಡಿದ್ದಳು. ಸನ್ಮಾನ ಮಾಡುವ ನೆಪದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಗೆ ಜಿಗಿದ ಮಾಜಿ ಸಚಿವನ ನಂಬರ್ ಪಡೆದಿದ್ಲು. ನಾನು ಕಲಬುರಗಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ. ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಎಂದು ಪರಿಚಯ ಮಾಡಿಕೊಂಡಿದ್ದಳು ಎಂದು ತಿಳಿದು ಬಂದಿದೆ.
ನೀವೂ ನಮ್ಮ ಪಕ್ಷಕ್ಕೆ ಬಂದಿದ್ದು ಸಂತಸ ತಂದಿದೆ. ನಿಮ್ಮನ್ನ ಸನ್ಮಾನಿಸಬೇಕು ಅಂತ ಕರೆ ಮಾಡಿದೆ ಎಂದು ಇದೇ ತಿಂಗಳ 15ನೇ ತಾರೀಖು ಮಾಜಿ ಸಚಿವರಿಗೆ ಕರೆ ಮಾಡಿದ್ದ ಮಂಜುಳಾ ನೈಸ್ ಆಗಿ ಮಾತಾಡಿದ್ದಾಳೆ.ಇದಾದ ನಂತರ ನಿತ್ಯ ಗುಡ್ ಮಾರ್ನಿಂಗ್, ಹಾಯ್ ಹಲೋ, ಹಾರ್ಟ್ ಸಿಂಬಲ್ ಕಳಿಸಿ ಚಾಟ್ ಮಾಡಿದ್ದಾಳೆ.
ಈ ಐನಾತಿ ಮಂಜುಳಾ ಮೊದಲು ವಿಡಿಯೋ ಕಾಲ್ ನಲ್ಲೆ ಮಿಸ್ಡ್ ಕಾಲ್ ಮಾಡ್ತಿದ್ಳಂತೆ.ಮತ್ತೆ ವೀಡಿಯೋ ಕಾಲ್ ಮಾಡಿದಾಗ ಮುಖ ತೋರಿಸಿ ಸ್ಮೈಲ್ ಮಾಡಿ ಮಾತನಾಡಿದ್ಲು. ನಂತರ ಮಂಜುಳ ಕೆಲ ಇಂಟರ್ ನೆಟ್ ನಲ್ಲಿನ ಅಶ್ಲೀಲ ವಿಡಿಯೋ ಸೆಂಡ್ ಮಾಡ್ತಿದ್ಳಂತೆ.
ಇದಕ್ಕೆ ಮಾಜಿ ಸಚಿವರ ರಿಪ್ಲೇ ಚಾಟ್ ಉಳಿಸಿಕೊಂಡು ತನ್ನ ಚಾಟ್ ಡಿಲೀಟ್ ಮಾಡಿದ್ಲು ಎಂಬುದು ಬಯಲಾಗಿದೆ.ಹೀಗೆ ಒಂದು ವಾರ ಕಳೆಯುತ್ತಿದ್ದಂತೆ ಆ ಮಾಜಿ ಸಚಿವರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದು, ಕೊಡಿಗೆಹಳ್ಳಿ ಬಳಿಯ ಹೋಟೇಲ್ ನಲ್ಲಿ ಆ ಮಾಜಿ ಸಚಿವರ ಪುತ್ರನನ್ನ ಭೇಟಿ ಮಾಡಿ 20 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾಳೆ. ಇದಾದ ನಂತರ ಆ ಮಾಜಿ ಸಚಿವರ ಪುತ್ರ ಇದೇ ತಿಂಗಳ 25ರಂದು ಸಿಸಿಬಿಗೆ ದೂರು ಸಲ್ಲಿಸಿದ್ದಾರೆ. ಇದಾದ ನಂತರ ಹಣ ಪಡೆಯಲು ಬೆಂಗಳೂರಿಗೆ ಬಂದಿದ್ದಾಗ ಸಿಸಿಬಿ ಪೊಲೀಸ್ರು ಮಂಜುಳಾ ಹಾಗೂ ಆಕೆಯ ಪತಿ ಶಿವರಾಜ್ ಬಂಧಿಸಿದ್ದಾರೆ.