• Home
  • About Us
  • ಕರ್ನಾಟಕ
Saturday, December 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಶ್ರೀಲಂಕಾದಿಂದ ಕಾಳು ಮೆಣಸು ಆಮದು ; ಐದು ವಾರಗಳಲ್ಲಿ ಕಿಲೋಗೆ 35 ರೂಪಾಯಿ ಕುಸಿತ

ಪ್ರತಿಧ್ವನಿ by ಪ್ರತಿಧ್ವನಿ
October 25, 2024
in Top Story, ಇತರೆ / Others
0
Share on WhatsAppShare on FacebookShare on Telegram

ಕೊಚ್ಚಿನ್‌ ಅಕ್ಟೋಬರ್‌ 24 ; ದೇಶೀ ಮಾರುಕಟ್ಟೆಯಲ್ಲಿ ಕಾಳು ಮೆಣಸಿನ ದರವು ಎರಡು ವಾರಗಳಲಿ ಕಿಲೋಗೆ ೧೯ ರೂಪಾಯಿಗಳಷ್ಟು ಕುಸಿತ ಕಂಡಿದೆ.ಕಳೆದ ವಾರದಲ್ಲಿಯೇ ಕಿಲೋಗೆ ₹ 11 ಕುಸಿತವಾಗಿದೆ, ಕಳೆದ ಐದು ವಾರಗಳಲ್ಲಿ ಒಟ್ಟು ಕುಸಿತವು ಕೆಜಿಗೆ ₹ ೩೫ ರಷ್ಟು ಕುಸಿದಿದೆ.(South Asian Free Trade Area ) SAFTA ಅಡಿಯಲ್ಲಿ 8 ಶೇಕಡಾ ಸುಂಕದ ಅಡಿಯಲ್ಲಿ ಶ್ರೀಲಂಕಾದಿಂದ ಆಮದು ಮಾಡಿದ ಉತ್ಪನ್ನಗಳ ಬೃಹತ್ ಆಗಮನವು ಬೆಲೆ ಕುಸಿತಕ್ಕೆ ಕಾರಣವೆಂದು ಬೆಳೆಗಾರ ಸಂಘಟನೆಗಳು ಆರೋಪಿಸಿದೆ.

ADVERTISEMENT

ಕೊಚ್ಚಿ ಟರ್ಮಿನಲ್ ಮಾರುಕಟ್ಟೆಯಲ್ಲಿ ಅನ್‌ಗಾರ್ಬಲ್ಡ್‌ ಕಿಲೋಗೆ ₹ 627 ಮತ್ತು ಗಾರ್ಬಲ್ಡ್‌ಗೆ ₹ 647 ರಂತೆ ಬೆಲೆಗಳು ಇವೆ. ಕೊಚ್ಚಿಯ ಕಾಳುಮೆಣಸಿನ ವ್ಯಾಪಾರಿ ಕಿಶೋರ್ ಶಾಮ್‌ಜಿ, ಮುಂಬೈನಿಂದ ಬಂದಿರುವ ಶ್ರೀಲಂಕಾದ ಕಾಳುಮೆಣಸು ಲಭ್ಯತೆಯೊಂದಿಗೆ ಬಹುತೇಕ ಎಲ್ಲಾ ಮಾರುಕಟ್ಟೆಗಳು ತುಂಬಿವೆ ಮತ್ತು ದಕ್ಷಿಣದ ಮಾರುಕಟ್ಟೆಗಳಲ್ಲಿಯೂ ಮಾರಾಟವಾಗುತ್ತಿದೆ ಎಂದು ಹೇಳಿದರು. ಶ್ರೀಲಂಕಾದ ಆಮದಿನ ಕಾರಣದಿಂದ ಸ್ಥಳೀಯವಾಗಿ ಬೆಳೆದ ಕಾಳುಮೆಣಸಿನ ಬೆಲೆ ಮೇಲೆ ಮತ್ತಷ್ಟು ಒತ್ತಡವನ್ನು ಹಾಕಿದ್ದು ಇದು ದರ ಕುಸಿತಕ್ಕೆ ಕಾರಣವಾಗುತ್ತದೆ ಮತ್ತು ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಕಾಳು ಮೆಣಸು ಬೆಳೆಯುತ್ತಿರುವ ಬೆಳೆಗಾರರು ತಮ್ಮ ಸ್ಟಾಕ್ ಅನ್ನು ಮಾರಾಟ ಮಾಡಲು ಮುಂದಾಗುತಿದ್ದಾರೆ.

ಬೆಲೆ ಚೇತರಿಕೆಯ ನಿರೀಕ್ಷೆಯಲ್ಲಿ ಕಾಳುಮೆಣಸು ದಾಸ್ತಾನು ಇಟ್ಟಿದ್ದ ರೈತರ ಸಂಘಗಳು ಸಹ ತಮ್ಮ ದಾಸ್ತಾನುಗಳನ್ನು ಖಾಲಿ ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು. ಅಂಕಿಅಂಶಗಳನ್ನು ಉಲ್ಲೇಖಿಸಿ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಿಂದ ಒಟ್ಟು 10,433 ಟನ್‌ ಆಮದು ಆಗಿದ್ದು ಇತರ ಉತ್ಪಾದಕ ದೇಶಗಳಿಂದ ಒಟ್ಟು 12,606 ಟನ್‌ ಆಮದಾಗಿದೆ.ಶ್ರೀಲಂಕಾ ವಾರ್ಷಿಕವಾಗಿ ೨೫ ಸಾವಿರ ಟನ್‌ ಉತ್ಪಾದನೆ ಮಾಡುತಿದ್ದು ಇದರಲ್ಲಿ ಅರ್ದಕ್ಕಿಂತ ಹೆಚ್ಚು ಕಾಳು ಮೆಣಸನ್ನು ರಫ್ತು ಮಾಡಲೇ ಬೇಕಿದೆ. ಏಕೆಂದರೆ ಅಲ್ಲಿನ ಆಂತರಿಕ ಬಳಕೆ ಕಡಿಮೆ ಇದೆ.

ತಮ್ಮ ಹೆಚ್ಚುವರಿ ದಾಸ್ತಾನುಗಳನ್ನು ಮಾರಾಟ ಮಾಡಲು ಭಾರತದತ್ತ ನೋಡುತ್ತಿದ್ದಾರೆ ಎಂದು ಭಾರತೀಯ ಮೆಣಸು ಮತ್ತು ಮಸಾಲೆಗಳ ವ್ಯಾಪಾರ ಸಂಘದ ನಿರ್ದೇಶಕರೂ ಆಗಿರುವ ಶಾಮ್‌ ಜಿ ಹೇಳಿದ್ದಾರೆ. ಆದರೆ ಆಮದು ಮಾಡಲಾದ ವಸ್ತುವು ಕಡಿಮೆ ಪ್ರಮಾಣದ ಸಾಂದ್ರತೆ, ಹೆಚ್ಚಿನ ಶೇಕಡಾವಾರು ತೇವಾಂಶ ಮತ್ತು ಶಿಲೀಂಧ್ರದ ಉಪಸ್ಥಿತಿಯನ್ನು ಹೊಂದಿದೆ ಎಂದು ಅವರು ಆರೋಪಿಸಿದರು ಮತ್ತು ಇದು ಭಾರತದಲ್ಲಿ ಉತ್ಪಾದಿಸಿದ ಮೆಣಸಿಗೆ ಬೆಲೆಗಳು ಕುಸಿಯಲು ಕಾರಣವಾಗುವ ಅಂಶವಾಗಿದೆ ಎಂದು ಅವರು ಆರೋಪಿಸಿದರು.

ಭಾರತದ ಒಟ್ಟು ಉತ್ಪಾದನೆ 70 ಸಾವಿರ ಟನ್‌ಗಳಷ್ಟಿದ್ದು ಇದರಲ್ಲಿ ಶೇಕಡಾ 45 ರಷ್ಟು ಕರ್ನಾಟಕದ ಪಾಲು ಆಗಿದೆ.ಭಾರತೀಯ ಕಾಳುಮೆಣಸು ಮತ್ತು ಮಸಾಲೆ ವ್ಯಾಪಾರಿಗಳ ಒಕ್ಕೂಟದ ಕೇರಳ ಘಟಕವು ದೇಶೀಯ ರೈತರ ಹಿತಾಸಕ್ತಿಗಳಿಗೆ ಮಾರಕ ಆಗಿರುವ ಇಂತಹ ಆಮದುಗಳನ್ನು ತಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ. ಆಮದು ನೀತಿಯಲ್ಲಿನ ಲೋಪದೋಷಗಳು ಮರು-ರಫ್ತು ಮಾಡಲು ಉದ್ದೇಶಿಸಿರುವ ಆಮದು ಮಾಡಿದ ಕಾಳುಮೆಣಸನ್ನು ದೇಶೀಯ ಮಾರುಕಟ್ಟೆಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಎಂದು ಒಕ್ಕೂಟವು ಆರೋಪಿಸಿದೆ. ಭಾರತದೊಳಗೆ ಮೆಣಸನ್ನು ಆಮದು ಮಾಡಿಕೊಂಡು ಅದನ್ನು ಮರು-ರಫ್ತು ಮಾಡಲು ( Director General of Foreign Trade) ಡಿಜಿಎಫ್‌ಟಿ ಆರು ತಿಂಗಳ ಅವಧಿಯನ್ನು ನೀಡಿದೆ, ಇದು ಕಾಳುಮೆಣಸಿನಂತಹ ಸೂಕ್ಷ್ಮ ವಸ್ತುವಿನ ಆಮದು-ರಫ್ತು ನೀತಿಯಲ್ಲಿನ ಪ್ರಮುಖ ವೈಪರೀತ್ಯಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.

ಈ ಆರು ತಿಂಗಳು ದಾಸ್ತಾನು ಇಡುವ ಅನುಮತಿಯಿಂದಾಗಿ ಮರು ರಫ್ತು ಮಾಡಲು ಆಮದು ಮಾಡಿಕೊಂಡ ವ್ಯಾಪಾರಿಗಳು ಅದನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಾಭ ಗಳಿಸುತಿದ್ದಾರೆ. ಇದನ್ನು ತಡೆಯಲು ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳುವಂತೆ ಸಂಘಟನೆಗಳು ಒತ್ತಾಯಿಸಿವೆ. –ಕೋವರ್‌ ಕೊಲ್ಲಿ ಇಂದ್ರೇಶ್‌

Tags: 35 rupees fall per kiloCochindomestic marketImport of ground pepperSouth Asian Free Trade AreaSri lanka
Previous Post

ನ್ಯೂಜಿಲೆಂಡ್ ವಿರುದ್ಧ ಭಾರತದ ಪ್ರಾಬಲ್ಯ – ಕಮಾಲ್ ಮಾಡಿದ ವಾಷಿಂಗ್ಟನ್ ಸುಂದರ್ !

Next Post

ದೆಹಲಿಯ ಮಾಲಿನ್ಯ ನಿಯಂತ್ರಣಕ್ಕೆ ಸ್ವಯಂ ಸೇವಕರ ನೇಮಕಕ್ಕೆ ಲೆಪ್ಟಿನೆಣಟ್‌ ಗವರ್ನರ್‌ ಸೂಚನೆ

Related Posts

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
0

ಬೆಂಗಳೂರು: ಗ್ರ್ಯಾಮಿ ಪ್ರಶಸ್ತಿ ವಿಜೇತ(Grammy Winner ) ಸಂಗೀತಗಾರ ರಿಕಿ ಕೇಜ್ (Ricky Kej) ಅವರ ಬೆಂಗಳೂರು(Bengaluru) ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ನೀರಿನ ಸಂಪ್‌ಗೆ ಮುಚ್ಚಲಾದ...

Read moreDetails
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

December 13, 2025
ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’

ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’

December 13, 2025
Next Post

ದೆಹಲಿಯ ಮಾಲಿನ್ಯ ನಿಯಂತ್ರಣಕ್ಕೆ ಸ್ವಯಂ ಸೇವಕರ ನೇಮಕಕ್ಕೆ ಲೆಪ್ಟಿನೆಣಟ್‌ ಗವರ್ನರ್‌ ಸೂಚನೆ

Recent News

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’
Top Story

ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

December 13, 2025
ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!