
ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವ್ರ ವಿರುದ್ಧ ಮತ್ತೊಂದು ಭೂ ಹಗರಣದ ಆರೋಪ ಕೇಳಿಬಂದಿದೆ.. ಈ ಸಂಬಂಧ ದಾಖಲೆ ಬಿಡುಗಡೆ ಮಾಡಿರುವ ಮೈಸೂರು ಮೂಲದ RTI ಕಾರ್ಯಕರ್ತ ಗಂಗರಾಜು, ಮುಡಾಕ್ಕೆ ಸೇರಿದ 20 ಗುಂಟೆ ಜಾಗ ಕಬಳಿಸಿದ್ದಾರೆ ಅಂತ ಆರೋಪ ಮಾಡಿದ್ದಾರೆ..
ಮೈಸೂರಿನ KRS ರಸ್ತೆಯಲ್ಲಿನ ಸರ್ವೆ ನಂಬರ್ 454ರ ಜಾಗದಲ್ಲಿ 4 ಎಕರೆ 11 ಗುಂಟೆ ಜಾಗವನ್ನ ಸಿಎಂ ಪತ್ನಿ ಪಾರ್ವತಿ ₹1.85 ಕೋಟಿ ಕೊಟ್ಟು ಖರೀದಿ ಮಾಡಿರ್ತಾರೆ.. ಸೆಪ್ಟೆಂಬರ್ 29, 2023 ರಂದು ಸಿಎಂ ಪತ್ನಿ ಹೆಸರಿಗೆ ರಿಜಿಸ್ಟರ್ ಮಾಡಲಾಗಿತ್ತು.. ಅದರಲ್ಲಿ ರಸ್ತೆ ಮತ್ತು ಪೈಪ್ಲೈನ್ಗೆ ಸೇರಿದ್ದ ಜಾಗವನ್ನೂ ಸೇರಿಸಿ ರಿಜಿಸ್ಟರ್ ಮಾಡಿಸಿಕೊಂಡಿದ್ದರು.. ಆದರೆ ಆರ್ಟಿಐ ಮೂಲಕ ಅರ್ಜಿ ಹಾಕಿದ ಬಳಿಕ ಮುಡಾ ಜಾಗಬಿಟ್ಟು ಕೊಟ್ಟಿದ್ದಾರೆ.

ಸಂಕಷ್ಟ ಎದುರಾಗುವ ಆತಂಕದಲ್ಲಿ ಜಾಗವನ್ನ ಮತ್ತೆ ಮುಡಾಗೆ ಬಿಟ್ಟುಕೊಟ್ಟು ರೀ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ ಎಂದು ಗಂಗರಾಜು ದಾಖಲೆ ಸಮೇತ ಆರೋಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ಖರೀದಿ ಆಗಿರುವ ಭೂಮಿ, 2024ರ ಆಗಸ್ಟ್ನಲ್ಲಿ ಮತ್ತೆ ಎರಡನೇ ಬಾರಿಗೆ ರೀ ರಿಜಿಸ್ಟರ್ ಆಗಿದೆ. ಇದು ಯಾಕೆ..? ಎಂದು ಪ್ರಶ್ನಿಸಿದ್ದಾರೆ.






