ಸಿಕಂದರಾಬಾದ್: ತೆಲಂಗಾಣದ ಸಿಕಂದರಾಬಾದ್ನ ಅಂಗಡಿಯೊಂದರಿಂದ ಆಹಾರ ಸುರಕ್ಷತಾ ಇಲಾಖೆ ಶುಕ್ರವಾರ ಸುಮಾರು 700 ಕೆಜಿ ಕೊಳೆತ ಕೋಳಿಯನ್ನು ವಶಪಡಿಸಿಕೊಂಡಿದೆ. ಹೈದರಾಬಾದ್ ಜಿಲ್ಲೆಯಾದ್ಯಂತ ಇರುವ ತಿನಿಸು ಅಂಗಡಿಗಳಿಗೆ ಈ ಕೋಳಿಯನ್ನು ಸರಬರಾಜು ಮಾಡಬೇಕಿತ್ತು. ಸಿಕಂದರಾಬಾದ್ನ ಬೇಗಂಪೇಟೆಯ ಪ್ರಕಾಶ್ನಗರದಲ್ಲಿರುವ ಬಾಲಯ್ಯ ಚಿಕನ್ ಸೆಂಟರ್ನ ಮಾಲೀಕರು ಚಿಕನ್ ಅನ್ನು ದೀರ್ಘಕಾಲದವರೆಗೆ ಫ್ರಿಡ್ಜ್ನಲ್ಲಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅನುಮಾನಗೊಂಡ ಗ್ರಾಹಕರು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಅಂಗಡಿ ಮೇಲೆ ದಾಳಿ ನಡೆಸಿದ್ದು, ಕೋಳಿ ಮಾಂಸವನ್ನು ಕಳೆದ ಆರು ತಿಂಗಳಿಂದ ಫ್ರಿಡ್ಜ್ನಲ್ಲಿ ಸಂಗ್ರಹಿಸಿ ಜಿಲ್ಲೆಯ ವಿವಿಧ ಮದ್ಯದಂಗಡಿ, ಬಾರ್, ಹೋಟೆಲ್ಗಳಿಗೆ ಸರಬರಾಜು ಮಾಡುತ್ತಿರುವುದು ಪತ್ತೆಯಾಗಿದೆ.
ಸರಬರಾಜು ಮಾಡುವ ಮೊದಲು ಕೊಬ್ಬಿನ ಪದಾರ್ಥಗಳು ಮತ್ತು ಮೂಳೆಗಳನ್ನು ರಾಸಾಯನಿಕಗಳೊಂದಿಗೆ ಬೆರೆಸಿರುವುದು ಕಂಡುಬಂದಿದೆ. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಕಂಡು ಬಂದ ನಂತರ ಅಧಿಕಾರಿಗಳು ಕೊಳೆತ ಕೋಳಿ ದಾಸ್ತಾನುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕೋಳಿಯನ್ನು ಸೇವಿಸುವುದು ಅನಾರೋಗ್ಯಕರ ಮಾತ್ರವಲ್ಲದೆ ದೊಡ್ಡ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆಹಾರ ಸುರಕ್ಷತಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕೋಳಿಯನ್ನು ಸೇವಿಸುವುದು ಅನಾರೋಗ್ಯಕರ ಮಾತ್ರವಲ್ಲದೆ ದೊಡ್ಡ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆಹಾರ ಸುರಕ್ಷತಾ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ತೀವ್ರ ದುರ್ವಾಸನೆ ಬೀರುತ್ತಿದ್ದು, ಪರಿಶೀಲನೆ ನಡೆಸಿದಾಗ ಕೋಳಿ ಮಾಂಸದಲ್ಲಿ ರಾಸಾಯನಿಕ ಬೆರೆಸಿ ಮಾರಾಟ ಮಾಡುತ್ತಿರುವುದು ಕಂಡು ಆಶ್ಚರ್ಯಚಕಿತರಾದರು.ಸುಮಾರು 700 ಕೆಜಿ ತೂಕದ ಸಂಪೂರ್ಣ ಚಿಕನ್ ಸ್ಟಾಕ್ ಅನ್ನು ತಕ್ಷಣವೇ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.