ರಿಯಲ್ ಸ್ಟಾರ್ ಉಪೇಂದ್ರ (Real star Upendra)ನಟಿಸಿ, ನಿರ್ದೇಶಿಸಿರುವ ಯುಐ (UI) ಸಿನಿಮಾ ಕೇವಲ ಕನ್ನಡ ಮಾತ್ರವಲ್ಲದೇ ದೇಶಾದ್ಯಂತ ಕ್ರೇಝ್ ಹುಟ್ಟುಹಾಕಿದೆ. ಈಗಾಗಲೇ ಸಿನಿಮಾ ಬಿಡುಗಡೆ ಯಾವಾಗ ಎಂದು ತುದಿಗಾಲಲ್ಲಿ ನಿಂತಿದ್ದ ಅಭಿಮಾನಿಗಳಿಗೆ ಚಿತ್ರ ತಂಡ ಗುಡ್ ನ್ಯೂಸ್ ಕೊಟ್ಟಿದೆ.

ಇದೀಗ ಚಿತ್ರತಂಡ ಕೊನೆಗೂ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಅಂದುಕೊಂಡಿದ್ದಕ್ಕಿಂತ ಕೊಂಚ ತಡವಾಗಿಯೇ ಯುಐ ಚಿತ್ರ ಮಂದಿರಗಳಿಗೆ ಬರ್ತಿದೆ. ಇದೇ ಡಿಸೆಂಬರ್ 20ರಂದು (December 20th) ಯುಐ ಸಿನಿಮಾ ಥಿಯೇಟರ್‌ಗಳಲ್ಲಿ ಅಬ್ಬರಿಸಲಿದೆ.
ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದ್ದು, ರಿಲೀಸ್ ಡೇಟ್ ಮಾತ್ರ ಇನ್ನೂ ಅನೌನ್ಸ್ ಮಾಡಿರಲಿಲ್ಲ. ಇದೀಗ ಯುಐ ಬಿಡುಗಡೆಗೆ ಸಿದ್ಧವಾಗಿದ್ದು, ಡಿಸೆಂಬರ್ 20ರಮದು ಅಭಿಮಾನಿಗಳ ತಲೆಹೆ ಹುಳ ಬಿಡಲು ಉಪ್ಪಿ ರೆಡಿಯಾಗಿದ್ದಾರೆ.










